Wednesday, January 24, 2007

ನನ್ನ ತೋಟದ ನಿತ್ಯ ಮಲ್ಲಿಗೆ


`white fragrant carpet of snow'(ಶುಭ್ರ ಬಿಳಿ ಮಂಜಿನ ಸುಗಂಧಿತ ನೆಲಹಾಸು)
ಎಂದು ನಾನು ಮೊದಲ ಬಾರಿ Alyssum ಅನ್ನು ಕಂಡದ್ದನ್ನು ಬಣ್ಣಿಸ ಬಹುದೇನೋ....
I see her in the faces of flowers,
her laugh lying in wait
in the sweet white alyssum....
ಎನ್ನುತ್ತಾನೆ ಕವಿ. Alyssum ಗುಲಾಬಿಯಂತೆ ಕಣ್ಣು ಕೋರೈಸುವ ಹೂವೇನಲ್ಲ ಆದರೆ ಅದರ ಜೇನಿನಂಥಾ ಮಧುರ ಪರಿಮಳವಿದೆ ನೋಡೀ...ಆ ಪರಿಮಳವನ್ನು ನೆನಪಿಸಿ ಕೊಂಡೇ ಕವಿ ತನ್ನ ಪ್ರೇಮಿಕೆಯ ನಗೆಯನ್ನು Alyssum ನಲ್ಲಿ ಕಂಡಿರಬೇಕು
Alyssum ಪುಟ್ಟ ಪುಟ್ಟ ಬಿಳಿ ಹೂಗಳ ಪುಟಾಣಿ ಗೊಂಚಲುಗಳಿಂದ ಕೂಡಿದ ಲಿಲಿಪುಟ್ಟಿನಂಥಾ ಗಿಡ (ಎತ್ತದ 4-6 ಇಂಚು)ತಿಂಗಳುಗಳಗಟ್ಟಲೆ ನಿರಂತರವಾಗಿ ಹೂ ಸುರಿಸುವ Alyssum ಬೇರೆಲ್ಲಾ ಗಿಡಗಳು ಎಲೆ ಹೂ ಏನೊಂದೂ ಇಲ್ಲದೆ ಮಂಕಾಗಿ ನಿಲ್ಲುವ ಛಳಿಗಾಲದಲ್ಲೂ ಸುಗಂಧ ಸೂಸಿ ನಲಿಯುತ್ತಿರುತ್ತದೆ
ಈ ಪುಟ್ಟ ಸುಗಂಧ ರಾಣಿಯನ್ನು ಸಾಮಾನ್ಯವಾಗಿ ಹುಲ್ಲು ಹಾಸಿನ ಅಂಚಿಗೆ ಸುವಾಸನೆಯ ಜರತಾರಿಯಂತೆ ಬೆಳೆಸುತ್ತಾರೆ ವಿಶೇಷ ಆರೈಕೆ ಏನೂ ಬೇಡದ Alyssum ನಿಜವಾಗಿಯೂ `Worth beyond beauty'
ನಮ್ಮನೆಯ ಕುಂಡದಲ್ಲಿ ಸದಾ ಅರಳಿ ನಗುವ ಈ ಬೆಳ್ಳಿ ಚುಕ್ಕಿ ಸುಂದರಿ ನನ್ನ ತೋಟದ ನಿತ್ಯ ಮಲ್ಲಿಗೆ
ಪುರಾತನ ಗ್ರೀಕ್ ವಿದ್ವಾಂಸರು ಈ ಸುವಾಸನೆಯ ಸರಳ ಸುಂದರಿಯನ್ನು ತಮ್ಮ ಗ್ರಂಥಗಳಲ್ಲಿ ವರ್ಣಿಸಿರುವುದು ಹೀಗೆ...
Alyssum, a dainty plant of slender, silvery leaves interspersed with fragrant clusters of small
white flowers is a cure for madness. In Greek “a” is “not”, and “lysa” is “madness”.
ಆದರೆ ನನ್ನ ಅಭಿಪ್ರಾಯದಲ್ಲಿ Alyssum ನ ಸುಗಂಧವೇ ಹುಚ್ಚು ಹಿಡಿಸುವಂತದ್ದು...ಇನ್ನು ವಾಸಿ ಮಾಡುವುದೇನು ಬಂತೂ...?
ಇಹದ ಪರಿಮಳದ ಹಾದಿ-3
********************
ಟಿಪ್ಪಣಿ-
ಬಹಳ ದಿನಗಳಿಂದ ಮಿತ್ರರ ಬ್ಲಾಗ್ ಲಿಂಕ್ ದುರ್ಗದಲ್ಲಿ ಹಾಕುವ ಕೆಲಸ ಉಳಿದಿತ್ತು ಇವತ್ತು ಹಾಕಿದ್ದೇನೆ. ಇನ್ನೂ ಕೆಲವನ್ನು ಹಾಕಬೇಕು. ಅನುಮತಿ ಕೊಟ್ಟ ಎಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು

5 Comments:

Blogger Shiv said...

ಮಾಲಾ ಅವರೇ,

Alyssum ನೋಡೋಕೆ ತುಂಬಾ ಮುದ್ದಾಗಿ ಕಾಣ್ತಿದೆ..
ಇದು ಚಳಿಗಾಲದಲ್ಲಿ ಮಾತ್ರನಾ ಹೂ ಬಿಡೋದು?

ಅಂದಾಗೆ Alyssum ಪದದ ಅರ್ಥ ನೋಡಿದರೆ ಅದು asylum ಇದ್ದವರಿಗೆ ಸಹಾಯವಾಗಬಹುದೇನೋ !?

10:59 PM  
Blogger Satish said...

ನೋಡ್ತಾ ಇರಿ, ಇವತ್ತಲ್ಲ ನಾಳೆ ಅಂತರ್ಜಾಲದ ಪುಟಗಳಲ್ಲಿ ವಾಸನೇನೂ ಬರೋ ಹಾಗ್ ಮಾಡ್ತಾರೆ...ಅವಾಗ ನಿಮ್ ಚಿತ್ರಗಳಿಗೆ ಇನ್ನೊಂದಿಷ್ಟ್ ಮೆರುಗು ಬರುತ್ತೆ.

8:09 AM  
Blogger mala rao said...

ಶಿವು ಅವರೇ,

ಇದು ಚಳಿಗಾಲದಲ್ಲಿ ಮಾತ್ರನಾ ಹೂ ಬಿಡೋದು?

ಇಲ್ಲಾ, ವರ್ಷ ಪೂರ್ತಿ ಹೂ ಬಿಡುತ್ತದೆ

ಅಂದಾಗೆ Alyssum ಪದದ ಅರ್ಥ ನೋಡಿದರೆ ಅದು asylum ಇದ್ದವರಿಗೆ ಸಹಾಯವಾಗಬಹುದೇನೋ

ಎರಡು ಪದಗಳೂ ಗ್ರೀಕ್ ಮೂಲದ್ದಿರಬಹುದೆಂದು ನನ್ನ ಊಹೆ

11:11 AM  
Blogger mala rao said...

ಕಾಳೂ ಅವರೇ,
ಏನು ಬಹಳಾ ಅಪರೂಪವಾಗಿ ಬಿಟ್ಟಿದ್ದಿರೀ?

ನೀವು ಹೇಳಿದ `ಆ ನಾಳೆ' ಬೇಗ ಬರಲೆಂದು ಹಾರೈಸೋಣವೇ?

11:13 AM  
Blogger Satish said...

ಸ್ವಲ್ಪ ಮನೇ ಕಡೆ ಕೆಲ್ಸಾ ಇತ್ತು, ಇತ್ಲಾಗೆ ಕಂಪ್ಯೂಟರ್ರ್ ಕಡೆ ತಲೇ ಹಾಕೋದಕ್ಕೆ ಪುರುಸೊತ್ತು ಇರಲಿಲ್ಲ ಹಂಗಾಗಿ!

4:10 AM  

Post a Comment

Subscribe to Post Comments [Atom]

<< Home