Monday, January 29, 2007

ದುರ್ಗದಲ್ಲಿ ಪ್ರೇಮೋತ್ಸವ



ಹೇಳು ಪ್ರೀತಿಗೆ ಯಾವ ಭಾಷೆ?
ಹೇಳು ಕನಸಿಗೆ ಎಂಥಾ ಭಾಷೆ?

ಎಂದೋ ಕೇಳಿದ ಹಾಡು ಇಂದು ನೆನಪಿಗೆ ಬರುತ್ತಿದೆ ...

ಪ್ರೀತಿಗೆ ಭಾಷೆ ಯಾಕೆ ಬೇಕು?
ಕಣ್ಣಿಂದ ಕಣ್ಣಿಗೆ ತೂಗುವ ಹೂನೋಟದ ಸೇತುವೆಯಲ್ಲಿ ಸಂದೇಶಗಳು ಪಯಣಿಸುವಾಗ....

ಹೃದಯದ ಭಾಷೆ ಯಾವುದು?
ಅದನ್ನು ಹೃದಯವೇ ಅರಿಯುವುದು!

ಆದರೆ ಈ ಮೌನ ಭಾಷೆ ರಿಲೆಯಬಲ್ಲಾ? ಯೋಚನೆ ಬಂತು
ಕಣ್ಣಿನ /ಹೃದಯದ ಭಾಷೆ ಅಷ್ಟೊಂದು ಪ್ರಾಕ್ಟಿಕಲ್ ಅಲ್ಲಾ ಅಲ್ವಾ? ಅನ್ನಿಸೋಕೆ ಶುರುವಾಯಿತು!

ಕಣ್ಣಿನ ಭಾಷೆ ಅರ್ಥವಾಗದ `ಜಾಣ ಜಾಣೆಯರೂ' ಇರುತ್ತಾರೆಂಬುದಕ್ಕೆ ನೆನಪಿನ ಕೋಶದಿಂದ ಹಲವಾರು ನಿದರ್ಶನಗಳು ಎದ್ದು ಬಂದು ಕಣ್ಮುಂದೆ ನಿಂತವು
ನಾನು ಹೀಗೆ ಕವಿಗಳ ಭಾಷೆಯಲ್ಲಿ ಹೇಳಿ ಸುಮ್ಮನಾಗಿ ಬಿಟ್ಟರೆ ನನ್ನ ತಮ್ಮ ತಂಗಿಯರು ಬೈದು ಕೊಳ್ಳೋಲ್ವೇ?ಅಂತಾನೂ ಅನ್ಸೋಕೆ ಶುರುವಾಯಿತು
ಎಲ್ಲರೂ ಕಣ್ಣಿನ /ಹೃದಯದ ಭಾಷೆಯ ಮೇಲೇ ಭಾರ ಹಾಕಿ `ಸುಮ್ಮನೆ ಕೈ ಕಟ್ಟಿ ಕೂತು ಬಿಟ್ಟರೆ' ಪ್ರೇಮ ನೌಕೆ ದಡ ಸೇರುವುದು ಹೇಗೆ?

**********
ಒಂದಿಷ್ಟು ಒಳ್ಳೇ ಪ್ರೇಮ ಕವನಗಳನ್ನಾಯ್ದು ಒಂದು `ಪ್ರೇಮ ಕವನ ಗುಚ್ಛ'ವನ್ನು ಕಟ್ಟಿಕೊಡಬಾರದೇಕೆ ಅಂತ ಯೋಚನೆ ಮಾಡಿದೆ...
ಪ್ರೇಮಿಗಳ ದಿನದಿಂದ ಶುರು ಮಾಡಿ ವಾರವೋ ಹತ್ತು ದಿನವೋ ಕವನ ಪ್ರಕಟಿಸುವಾ ಅಂತ ಮೊದಲು ಅಂದುಕೊಂಡೆ ಹಾಗೆ ಮಾಡಿದರೆ ಅದು ಉದ್ದೇಶಿತರಿಗೆ ಉಪಯೋಗವಾಗುವುದು ಮುಂದಿನ ವರ್ಷವೇ...(ಅದೂ ಹುಡುಗಿ ಕಾದೂ ಕಾದೂ ಸಾಕಾಗಿ ಕೈ ಕೊಟ್ಟು ಹೋದ ಮೇಲೇನೇ...) ಅಂತ ಕೀಟಲೆಯ ಕಮೆಂಟ್ ಬಂತು!

ಈ ಕವನ ಗುಚ್ಛಕ್ಕಾಗಿ ಒಂದೊಂದೇ ಅಪರೂಪದ ಹೂ ಆರಿಸಿ ಜೋಡಿಸಲು ಪ್ರಾರಂಭಿಸಿದ್ದೇನೆ
ಸದ್ಯದಲ್ಲೇ ಹಲವು ಬಣ್ಣಗಳ `ಸುಂದರ ಬೊಕೇ' ದುರ್ಗದಲ್ಲಿ ಕಂಗೊಳಿಸಲಿದೆ
ಈ ಬೊಕೆಯಿಂದ `ಅವಳಿಗೆ /ಅವನಿಗೆ ' ಇಷ್ಟವಾಗಬಹುದಾದ `ಬಿಡಿ ಹೂ' ಆರಿಸಿ ನಿಮ್ಮ ಮನದ ಮಾತು
ಹೇಳುವುದು ನಿಮ್ಮ ಕೆಲಸ!



***************

ಟಿಪ್ಪಣಿ-`ಇಹದ ಪರಿಮಳದ ಹಾದಿ' ಪ್ರೇಮೋತ್ಸವದ ನಂತರ ಮುಂದುವರೆಯಲಿದೆ

3 Comments:

Blogger Satish said...

ನಮ್ಮೂರ್ ಹೈಕ್ಳು ಪ್ರೀತೀಗೀತಿ ಅಂತ ಸುಮ್ಕೆ ಟೈಮ್ ಹಾಳ್ ಮಾಡ್ತಾರಲ್ಲ, ಮೆಡಮ್ -- ಅವರಿಗೇನ್ ಅನ್ನೋಣ. ಪ್ರೀತೀ ಪ್ರೇಮಾ ಏನೇ ಇದ್ರೂನೂವೇ ಅದು ಬದುಕಿನ ಒಂದ್ ಭಾಗಾ ಆಗಿರ್‌ಬೇಕೇ ವಿನಾ ಅದೇ ಬದುಕಾಗೀ ಈ ಹೈಕ್ಳು ಇಸ್ಕೂಲ್ ಚೆಕ್ಕರ್ ಹೊಡಕಂಡು ಮಾರ್ನಿಂಗ್ ಶೋ ಸಿನಿಮಾ ನೋಡಿಕ್ಯಂಡ್ ಬಂದ್ರೆ ಏನ್ ಸಾಕಾರ್ ಆದಂಗಾತ್ ಹೇಳಿ?

ಇರ್ಲಿ ಬಿಡಿ, ಇನ್ನೊಂದಿಷ್ಟ್ ದಿನ 'ದುರ್ಗ'ದಲ್ಲಿ ಕವನ ಗುಚ್ಛಗಳನ್ನು ನೋಡುದುಕ್ಕಾದ್ರೂ ಬರಲೇ ಬೇಕು ಅನ್ನೋ ಹಾಗೆ ಮಾಡಿದ್ರಿ!

4:09 AM  
Blogger mala rao said...

ಕಾಳೂ ಅವರೇ, ನಿಮ್ಮ ಅಭಿಪ್ರಾಯ ಖಂಡಿತಾ ಸರಿಯಾದುದು
ಪ್ರೇಮ ದೊಡ್ಡದು ನಿಜ, ಆದರೆ ಜೀವನ ಪ್ರೇಮಕ್ಕಿಂಥಾ ದೊಡ್ಡದು. ಇದನ್ನು `ನಮ್ಮ ಐಕ್ಳು' ತಿಳಿದುಕೊಳ್ಳಬೇಕು

7:18 PM  
Blogger mala rao said...

ಶ್ರೀನಿವಾಸರೇ,
ಏನು ಬಹಳಾ ಅಪರೂಪಾ?
ಅಲ್ಲಾ ದುರ್ಗದಿಂದ ನಿಮ್ಮಾಕೆಗೊಂದು ಸುಂದರ ಹೂ ಕಿತ್ತು ಕೊಡಬಾರದೇಕೆ ನೀವು?

7:20 PM  

Post a Comment

Subscribe to Post Comments [Atom]

<< Home