ನಿನ್ನ ನೆನೆವೆ ನಿನ್ನ ನೆನೆವೆ
ಬಿರಿದ ಹೂವ ಮೇಲೆ ಗಾಳಿ
ಬೀಸಿ ಬರುವ ಸಮಯದಲ್ಲಿ
ತೆರೆಯ ಹಿಂದೆ ತೆರೆಗಳೋಡಿ
ಕೆರೆಯ ಕವಿತೆಯಾಗುವಲ್ಲಿ
ನಿನ್ನ ನೆನೆವೆ ನಿನ್ನ ನೆನೆವೆ ನನ್ನೊಲವಿನ ಮೂರ್ತಿಯೇ...
ದೂರ ದೂರ ತಾರೆ ತಾರೆ
ಕಣ್ಣ ಮುಚ್ಚಿ ತೆರೆಯುತಿರಲು
ನೀಲಿಯೊಳಗೆ ನಿನ್ನ ದನಿಯೆ
ನನ್ನ ದನಿಯ ಸೇರುವಲ್ಲಿ
ನಿನ್ನ ನೆನೆವೆ ನಿನ್ನ ನೆನೆವೆ ನನ್ನೊಲವಿನ ಕೀರ್ತಿಯೇ...
ಹಸಿರು ನಲಿವ ತಾಣದಲ್ಲಿ
ಉಸಿರು ಮಿಡಿವ ಪ್ರಾಣದಲ್ಲಿ
ಜೋಡಿಹಕ್ಕಿ ಹಾಡುವಲ್ಲಿ
ಮುಂದೆ ದಾರಿ ಕಾಣದಲ್ಲಿ
ನಿನ್ನ ನೆನೆವೆ ನಿನ್ನ ನೆನೆವೆ ನನ್ನೊಲವಿನ ಸ್ಪೂರ್ತಿಯೇ...
*****************
ಮಲ್ಲಿಗೆಯ ಕಂಪಿನ ಕೆ.ಎಸ್.ನ ಅವರ ಕವನಗಳ ಸೊಬಗನ್ನು ಯಾವ ಪದಗಳು ತಾನೇ ಬಣ್ಣಿಸಬಲ್ಲವು?
ತೆಂಗುಗರಿಗಳ ನಡುವೆ ತುಂಬು ಚಂದಿರ ಬಂದ ಆ ರಮ್ಯ ಘಳಿಗೆಯಲ್ಲಿ ಅಂಗಳದ ನಡುವೆ ಒಲುಮೆಯೊಳಗೊಂದಾಗಿ ನಿಂತು `ನಮಗಿಲ್ಲ ನೋವು ಸಾವು 'ಎಂದುಸುರುವ ಅಪ್ಪಟ ಭಾರತೀಯ ಪ್ರೇಮಿಗಳ ಚಿತ್ರ ಕೆತ್ತಿ ಕನ್ನಡಿಗರ ಮನ ಮಂದಿರದಲ್ಲಿ ಸ್ಥಾಪಿಸಿ ಬಿಟ್ಟ ಈ ಕವಿಯ ಬಗ್ಗೆ ಹೊಸದಾಗಿ ನಾನೇನು ತಾನೆ ಹೇಳಲಿ?
ತೆಂಗುಗರಿಗಳ ನಡುವೆ ತುಂಬು ಚಂದಿರ ಬಂದ ಆ ರಮ್ಯ ಘಳಿಗೆಯಲ್ಲಿ ಅಂಗಳದ ನಡುವೆ ಒಲುಮೆಯೊಳಗೊಂದಾಗಿ ನಿಂತು `ನಮಗಿಲ್ಲ ನೋವು ಸಾವು 'ಎಂದುಸುರುವ ಅಪ್ಪಟ ಭಾರತೀಯ ಪ್ರೇಮಿಗಳ ಚಿತ್ರ ಕೆತ್ತಿ ಕನ್ನಡಿಗರ ಮನ ಮಂದಿರದಲ್ಲಿ ಸ್ಥಾಪಿಸಿ ಬಿಟ್ಟ ಈ ಕವಿಯ ಬಗ್ಗೆ ಹೊಸದಾಗಿ ನಾನೇನು ತಾನೆ ಹೇಳಲಿ?
********************
ಎಲ್ಲರಿಗೂ ಶುಭಾಷಯಗಳು...
ನಿಮ್ಮ ಹೃದಯದಂಗಳದಲ್ಲಿ ಪ್ರೇಮದ ನಂದಾದೀಪ ಚಿರಕಾಲ ಬೆಳಗಲಿ...
ಪ್ರೇಮೋತ್ಸವ-10
4 Comments:
ಈ ಪದ್ಯ ಇದೇ ಮೊದ್ಲ್ ಕೇಂಡದ್ದ್. ಲೈಕಿತ್ತ್.
ಕೆ.ಏಸ್.ನ. ಕವಿತೆಗಳ ಬಗ್ಗೆ ಬೇರೆ ಮಾತೇ ಇಲ್ಲ. ಅವೆಲ್ಲವೂ ಚಿರನೂತನ ಕವಿತೆಗಳು.
ಪ್ರೇಮಗೀತೆಗಳನ್ನ ಪ್ರಕಟಿಸಿದ್ರಲ್ಲ. ಹಾಗೆ, ಪಟಾಯಿಸೋದು (ಬುಟ್ಟಿಗೆ ಹಾಕ್ಕೊಳ್ಳೊದು) ಹೇಗೆ ಅಂತಾನೂ ಒಂದು ಲೇಖನ ಸರಣಿ ಶುರುಮಾಡಿ:-))ಬಹು ಜನರ ಅಪೇಕ್ಷೆಯ ಮೇರೆಗೆ:-)
ಮೈಸೂರು ಮಲ್ಲಿಗೆಯ ಕವಿಯ ಪ್ರೇಮಗವಿತೆಗಳ ಸೊಬಗೇ ಅಂತದ್ದು ಅಲ್ವಾ..
ನಮಗಿಲ್ಲ ನೋವು ಸಾವು..
ನನ್ನವಳು..ಎಂತ ಸುಂದರ ಕವನ ಅದು..
ಪ್ರೇಮದಿನದ ಶುಭಾಶಯಗಳು..
ಭಾಗವತರೇ,
ಕವನ ನಿಮಗಿಷ್ಟವಾದುದು ಸಂತೋಷ
ಅಂದಹಾಗೆ ಈ ನಿಮ್ಮ `ಬಹು ಜನರೆಲ್ಲಾ' ನಿಮ್ಮೊಂದಿಗೆ ಜಗಲಿ ಮೇಲೆ ಕೂತಿರುವವರೇ?
ಶಿವು ಅವರೇ
ನಿಮಗೂ ಶುಭಾಷಯಗಳು
ನಿಮ್ಮ ಕವನ ಓದಿದೆ ತುಂಬಾ ಚೆನ್ನಾಗಿದೆ ಅಭಿನಂದನೆಗಳು
Post a Comment
Subscribe to Post Comments [Atom]
<< Home