Thursday, January 24, 2008

ಟ್ಯಾಗೋರರ `ಮಲ್ಲಿಗೆ'


The First Jasmines
Ah, these jasmines, these white jasmines!
I seem to remember the first day when I filled my hands
with these jasmines, these white jasmines.
I have loved the sunlight, the sky and the green earth;
I have heard the liquid murmur of the river
through the darkness of midnight;
Autumn sunsets have come to me at the bend of the road
in the lonely waste, like a bride raising her veil
to accept her lover.
Yet my memory is still sweet with the first white jasmines
that I held in my hands when I was a child.
Many a glad day has come in my life,
and I have laughed with merrymakers on festival nights.
On grey mornings of rain
I have crooned many an idle song.
I have worn round my neck the evening wreath of
BAKULAS woven by the hand of love.
Yet my heart is sweet with the memory of the first fresh jasmines
that filled my hands when I was a child.
- Rabindranath Tagore(1861–1941)
**********
ನೊಬೆಲ್ ಬಹುಮಾನ ಪಡೆದ ಏಷ್ಯಾದ ಪ್ರಥಮ ವ್ಯಕ್ತಿಯಾದ ನಮ್ಮ ರವೀಂದ್ರನಾಥ ಟ್ಯಾರೋರರ ಹೆಸರು ಕೇಳದ ಭಾರತೀಯನಾರು?ಬಂಗಾಳಿ ಕವಿ,ಚಿಂತಕ,ನಾಟಕಕಾರ ,ಕಲಾಕಾರ,ಕಾದಂಬರಿಕಾರ,ವಾಗ್ಗೇಯಕಾರ....ಪಟ್ಟಿ ಬೆಳೆಯುತ್ತಾ ಹೋಗುತ್ತದೆ ಗೀತಾಂಜಲಿಯಂಥ ಕವಿತಾಸಂಕಲನವನ್ನು ಕೊಟ್ಟ ಟ್ಯಾಗೋರರು ಹಲವು ಮನಕಲುಕುವ ಸಣ್ನಕಥೆಗಳನ್ನೂ ಬರೆದಿದ್ದಾರೆ.ರಬೀಂದ್ರ ಸಂಗೀತ್ ನಿಂದ ಬಂಗಾಳಿ ಸಾಹಿತ್ಯ ಮತ್ತು ಸಂಗೀತ ಲೋಕದಲ್ಲಿ ಟ್ಯಾಗೋರರು ಅಪಾರ ಪ್ರಭಾವ ಬೀರಿದರು
ಈ ಮಲ್ಲಿಗೆ ಕವನ ರವೀಂದ್ರರ 'The Crescent Moon' ಸಂಕಲನದಲ್ಲಿದೆ

Friday, January 18, 2008

ಲಿಲಿ...

The modest Rose puts forth a thorn,
The humble sheep a threat'ning horn:
While the Lily white shall in love delight,
Nor a thorn nor a threat stain her beauty bright.

-William Blake

************

William Blake (1757–1827)'Did he who made the Lamb make thee?' ಎಂದು ಬರೆದ(Tyger! Tyger! burning bright...ನೆನಪಾಯಿತೇ...?) ಬ್ಲೇಕ್ ನ ಯಾವುದಾದರೂ ಒಂದು ಪದ್ಯವನ್ನು ಶಾಲಾದಿನಗಳಲ್ಲೋ ಕಾಲೇಜಿನಲ್ಲೋ ಓದದವರು ವಿರಳ.
ಅವನ Songs of Innocence ಮತ್ತು Songs of Experience ಬಹು ಜನಪ್ರಿಯ ಹೊತ್ತಿಗೆಗಳು Songs of Innocence ಮಗುವಿನ ಮುಗ್ಧ ಕಣ್ಣುಗಳಿಂದ ಬಿಡಿಸಿದ ಚಿತ್ರಗಳು
ಅದೇ Songs of Experience ಬಾಹ್ಯ ಜಗತ್ತಿನ ಅನುಭವದ ಕ್ರೂರತೆಯನ್ನು ವ್ಯಂಗ್ಯವಾಗಿ ಚಿತ್ರಿಸುತ್ತದೆ The Chimney Sweeper,Ah Sun-flower,A poison Tree ಇವು ಈ ಸಂಕಲನದ ಪ್ರಮುಖ ಪದ್ಯಗಳು visionary mystic ಎಂದೇ ಹೆಸರಾದ ವಿಲಿಯಮ್ ಬ್ಲೇಕ್ ನ ಪದ್ಯಗಳು ಸುಮ್ಮನೆ ಓದಲು ಸರಳವಾಗಿ ಕಂಡರೂ ಗೂಢಾರ್ಥಗಳನ್ನೊಳಗೊಂಡಿರುತ್ತವೆ (ಇವುಗಳ ಬಗ್ಗೆ ಮತ್ತೆ ಬರೆಯುತ್ತೇನೆ)

Monday, January 14, 2008

ಹೊಸ ಬದುಕಿನ ಮುನ್ನುಡಿ...


ಎಳ್ಳು ಬೆಲ್ಲ ಹಂಚಿ ಒಳ್ಳೆ ಮಾತಾಡಿ
ಎಂಬುದು ಹಿರಿಯರ ಹೊನ್ನುಡಿ
ಸಂಕ್ರಮಣದಿ ಭಾನು ಇಡುತಿರಲು ಹೊಸ ಅಡಿ
ಬರೆವ ಬನ್ನಿ ಹೊಸ ಬದುಕಿನ ಮುನ್ನುಡಿ

ಸಂಕ್ರಾತಿ ಶುಭಾಷಯಗಳು

Wednesday, January 09, 2008

ಅಸೀಮ ರೂಪಿ ಆಗಸ...


"ಆಗಸ"

ಭೂಮಿಕಾಳ
ನೀಲ ನೀಲ
ಮೇಖಲ


ಒಮ್ಮೆ ಮಿಂಚು
ಒಮ್ಮೆ ಮಿಣುಕು
ಸರಿಗೆ ಅಂಚು


ಹಿತ ತಂಪು
ಹಿತ ಬಿಸುಪು
ಅಮ್ಮನದೇ ನೆನಪು...

Saturday, January 05, 2008

ಆರ್ಕಿಡ್...

ಆರ್ಕಿಡ್-
ಸುಗಂಧ ಸೂಸುವ
ಸುಂದರ ಚಿಟ್ಟೆ
ಮದುವೆಮನೆಗೆ ಹೊರಟ
ರೇಶ್ಮೆಯ ನೀರೆ
ಕಣ್ಣಿಗೆ ತಂಪಾದ
ಲಾಮಂಚ ಬೀಸಣಿಗೆ
ಮತ್ತು
ತುಟಿಯ ಮೇಲೊಂದು
ಮುಗುಳು ನಗೆ!

Labels: