Friday, September 15, 2006

ಹೂವಿನ ತುಟಿಯಲಿ ಮುಗುಳು ನಗೆ...

ಚುಮು ಚುಮು ನಸುಕಿನಲಿ ಅಂಗಳಕ್ಕೆ ಹೋದಾಗ
ಮೆಲ್ಲ ಮೆಲ್ಲನೆ ಬೀಸುತ್ತಿದ್ದ ತಂಪು ಗಾಳಿಯಲ್ಲಿ
ಓಲಾಡುತ್ತಾ ಹೂವು ನಗುತ್ತಿತ್ತು.

ಹೂವಿನ ತುಟಿಯಲಿ ಮುಗುಳು ನಗೆ
ಸುರಹೊನ್ನೆಗೆ ಚಿನ್ನದ ನೆರಳು
ಮೋಡದೂರಿನಲಿ ಮುತ್ತಿನ ತೇರು
ತಂಪಿನ ಹೆರಳು ಗಾಳಿಗೇ...
ಉಳಿಯಲಿ ಉಳಿಯಲಿ ನಾಳೆಗೇ ...

ಹೂವಿನ ಈ ಮುಗುಳು ನಗುವಿಗೆ ಕಾರಣವೇನೋ...

ಹೂವೇ...ಹೂವೇ...
ನಿನ್ನೀ ನಗುವಿಗೆ ಕಾರಣವೇನೆ...
ಸೂರ್ಯನ ನಿಯಮಾನೇ ...
ಚಂದ್ರನ ನೆನಪೇನೇ...

ಹೂವಿನ ಅಂದವನ್ನು ಕಂಡ ಪಥಿಕ ನೊಬ್ಬ
ತನ್ನ ಪ್ರೇಮಿಕೆಯನ್ನು ನೆನೆಸಿಕೊಂಡು
ಹೀಗೆ ಹೇಳಿದ್ದು ಅಸ್ಪಷ್ಟವಾಗಿ,
ಗಾಳಿಯಲ್ಲಿತೇಲಿಬಂತು....

ಹೂವೇ...ಮರೆಸಿಕೊ ಮೊಗವಾ
ಆ ಚೆಲುವಿಗೇ...ಆ ಸೊಬಗಿಗೇ...
ನೀ...ಸರಿ-ಸಮ,
ಇಲ್ಲಾ...ಇಲ್ಲಾ..ಇಲ್ಲಾ...

ಬಾಲ ಸೂರ್ಯ ಮೈಮುರಿದು ಮೇಲೇಳುತ್ತಿದ್ದ
ಅವನ ಜೊತೆ ದಿನದ`ರೇಸು' ಓಡಲುನಾನು ಒಳಬಂದೆ.
ಹೂವು ನಗುತ್ತಲೇ ಇತ್ತು...


6 Comments:

Blogger Anveshi said...

"ಹೂವೇ...ಹೂವೇ...
ನಿನ್ನೀ ನಗುವಿಗೆ ಕಾರಣವೇನೆ...
ಸೂರ್ಯನ ನಿಯಮಾನೇ ...
ಚಂದ್ರನ ನೆನಪೇನೇ..."

- ಕಾರಣವಿಲ್ಲದೆ ನಗುತ್ತಾ, ನೋಡಿದವರ ಮುಗುಳ್ನಗಿಸುತ್ತಾ ಆ ಹೂವಿನ ನಿಸ್ವಾರ್ಥ ಮನೋಭಾವದ ಹಿಂದೆ ಏನೋ ಇರಬೇಕು ಅಂತ ಕವಿಗಳು ಕಲ್ಪಿಸಿಕೊಂಡಿದ್ದೇಕೆ ಅಂತಾನೇ ಅರ್ಥ ಆಗಿಲ್ಲ.

ಹೂವು ಚೆನ್ನಾಗಿದೆ.... ಆ ಹೂವಿನಷ್ಟೇ ಬ್ಲಾಗೂ ಚೆನ್ನಾಗಿ ಅರಳುತ್ತಿದೆ.

8:42 PM  
Blogger mala rao said...

ಅನ್ವೇಶಿಗಳೇ,
ಏಕೆಂದರೇ ಅವರು ಕವಿಗಳು!
ರವಿ ಕಾಣದ್ದನ್ನು ಕವಿ ಕಂಡ (ಕಪಿ ಅಲ್ಲ) ಅಂತ ಮಾತೇ ಇದೆಯಲ್ಲಾ...

ಪ್ರೋತ್ಸಾಹದ ಕಾಂಪ್ಲಿಮೆಂಟ್ಸ್ ಗಾಗಿ ಥ್ಯಾಂಕ್ಸ್

9:36 PM  
Blogger bhadra said...

ಸುಂದರ ಕಲ್ಪನೆ
ಚಂದದ ನಿರೂಪಣೆ

ಕಾವ್ಯ ರಸಧಾರೆ ನಿರಂತರವಾಗಿ ಹರಿಸಿ. ನಿಮ್ಮನ್ನು ಹರಸಲು ಆ ಸರ್ವಶಕ್ತನಲಿ ನಾ ಬೇಡುವೆ.

9:45 PM  
Blogger Satish said...

ಹ್ಞೂ, ಕವಿಗಳು ಮಧ್ಯೆ ನಮಿಗೇನೈತಿ ಕೆಲ್ಸಾ...ಅಂತ ಸುಮ್ಕಿದ್ದೆ... ಏನೋ ನಮ್ದು ಒರಟು ಭಾಷಿ, ನಮಿಗೆ ನಾಜೂಕಾಗೀ ಹೇಳಾಕ್ ಬರೋಂಗಿಲ್ರಿ!

ನಿಮ್ ಗದ್ಯಾ ಭಾಳ್ ಛೊಲೋ ಇರ್ತಾವ್ ನೋಡ್ರಿ.

10:09 PM  
Blogger mala rao said...

ಮಾವಿನಯಾನಸರೇ,
ಆಗಾಗ ದುರ್ಗಕ್ಕೆ ಭೇಟಿ ಕೊಟ್ಟು ಕಮೆಂಟ್ ಹಾಕುತ್ತಿರುವುದಕ್ಕೆ
ಥ್ಯಾಂಕ್ಸ್
ನಾನು ಹರಿಸುವುದೆಲ್ಲಾ `ಕಡ' ತಂದ ಕಾವ್ಯ! ಎಂದೋ ಓದಿದ್ದು ,ಕೇಳಿದ್ದು ನೆನಪಾದಷ್ಟು ಬರೆದಿರುತ್ತೇನಷ್ಟೇ..
ನಮ್ಮೆಲ್ಲರನ್ನೂ ಆ ಸರ್ವಶಕ್ತ ಕಾಪಾಡಲೀ ಅಂಥ ನೀವು ಬೇಡುವುದಕ್ಕೆ ನನ್ನ `ಆಮೆನ್'

9:28 AM  
Blogger mala rao said...

ಕಾಳೂ ಅವರೇ,
ನನ್ನದು ಪದ್ಯವಂತೂ `ಛೋಲೊ' ಇಲ್ಲಾ ಸದ್ಯ ಗದ್ಯವಾದರೂ
ಇದೆಯಲ್ಲಾ... ಹೇಳಿದ್ದಕ್ಕೆ ಧನ್ಯವಾದಗಳು
ನಿಮ್ ಭಾಷಿ ಕೇಳಿ ನನಗೆ `ಬೇಂದ್ರೆ'ಅವರ ನೆನಪಾಯಿತು
ಮುಗಿಲ ಮಾರಿಗೆ ರಾಗರತಿಯ ನಂಜ ಏರಿತ್ತಾ ಅಂತ ಎಷ್ಟು
ಸೊಗಸಾಗಿ ಹಾಡಿದ್ದಾರೆ!

9:33 AM  

Post a Comment

Subscribe to Post Comments [Atom]

<< Home