Saturday, September 16, 2006

ಪುಟಾಣಿ ಬಕಾಸುರನೊಂದಿಗೆ ನಾದಲೋಕ ಯಾನ....



ಸಂಗೀತ ಮತ್ತು ಸಿನಿಮಾ ಲೋಕದಲ್ಲಿ ವಿಹರಿಸಲು ಮನೆಗೊಂದು

ಹೊಸ ಆಟಿಕೆ ಬಂದಿದೆ.ಮಂಗನ ಕೈಗೆ ಮಾಣಿಕ್ಯ ಸಿಕ್ಕಂತೆ ಆಗಿದೆ!

`ಕ್ರಿಯೇಟಿವ್ ಝೆನ್'(personal multi media player)ಎಂಬ ಈ ಪುಟಾಣಿ ಬಕಾಸುರ

ತಲಾ ನಾಲ್ಕು ನಿಮಿಷದ ಹದಿನೈದು ಸಾವಿರ ಹಾಡುಗಳನ್ನೂ,120 ಘಂಟೆ ಗಳಷ್ಟು

ಸಿನಿಮಾವನ್ನೂ(in any formet) ಸಾವಿರಾರು ಫೋಟೋಗಳನ್ನ ಹೊಟ್ಟೆಯಲ್ಲಿ

ತುಂಬಿಸಿಟ್ಟುಕೊಳ್ಳುತ್ತದೆ ಜೊತೆಗೆ F.M ರೇಡಿಯೋ ಮತ್ತು ರೆಕಾರ್ಡರ್ ಇವೆ

ಸಂಗೀತ ಸಾಗರದಲ್ಲಿ ತನ್ಮಯಳಾಗಿ ತೇಲಲು ನನಗೆ

ಇದೊಂದು ಪುಟ್ಟ ಹೊಸ ದೋಣಿ ವಿತ್ ಪುಟಾಣಿ ಹುಟ್ಟು!

ಖುಶಿಯಿಂದ ಹುಟ್ಟು ಹಾಕುತ್ತಾ ಹೊರಟಿರುವೆ ಯಾನ...

ಯಾವ ತೀರ ಸೇರಿಸುತ್ತೋ ಬಲ್ಲವರಾರು?

7 Comments:

Blogger nishu mane said...

ಮಾಲಾ,
ದಿನಾಲೂ ನಿನ್ನ ಬ್ಲಾಗ್-ಗೆ ಬಂದು, ಇವತ್ತೇನು ಬರೆದಿದಾಳೆ, ಯಾವ ಫೊಟೊ ಹಾಕಿದಾಳೆ ಅಂತ ನೋಡೋದೇ ಒಂದು ಖುಷಿ ಕೊಡೋ ಕೆಲಸವಾಗಿದೆ. ಚೆನ್ನಾಗಿ ಬರೀತಿದೀಯ. ಫೋಟೊಗಳು ಕೂಡ ಚೆನ್ನಾಗಿರತ್ವೆ. ಹೀಗೇ ಮುಂದುವರೆಸು.

ಪ್ರೀತಿಯಿಂದ
ಮೀರ.

12:38 PM  
Blogger Mahantesh said...

e 'ಕ್ರಿಯೇಟಿವ್ ಝೆನ್ 'sahAyadiMda elli yAna etta naDita ide aMta tiLasiddare jasti anakula ittu...
blog chennagi ide re!!!! specially use maDiro snaps bhaLa chalo idave...barita iri.

4:06 AM  
Blogger Mahantesh said...

olle mAhit ಕ್ರಿಯೇಟಿವ್ ಝೆನ್ bagge..
tamma yAna etta kaDe aMta tiLibahuda?
blognalli use madiro Pics chennagi ive....
barita iri.

4:08 AM  
Blogger Anveshi said...

ಏನಿದು ಅಂಗೈಯಲ್ಲಿ ಅರಮನೆ?

ನಮ್ಮ ಬ್ಯುರೋಗೆ ಒಂದ್ಸಾರಿ ಕಳುಹಿಸಿಕೊಡಿ... ಟೆಸ್ಟ್ ಮಾಡಿ, ಟೇಸ್ಟ್ ಮಾಡಿ ನೋಡ್ತೀವಿ... ಸರಿಯಾಗಿಲ್ಲದಿದ್ರೆ ವಾಪಸ್ ಕೊಡ್ತೀವಿ... ಸರಿಯಾಗಿದ್ರೆ ಇಟ್ಕೋತೀವಿ.

1:30 AM  
Blogger mala rao said...

ಮೀರಾ
ನಿಂಗೆ ಇವತ್ತು `ಅಫಿಶಿಯಲ್ಲಾಗಿ' ಸ್ವಾಗತ!
ಹೀಗೇ ದಿನಾ ಬರ್ತಾ ಇರು..
ಕೆಟ್ಟ ಫೋಟೋ ಹಾಕಿದರೆ ಬೈಬೇಡಾ ಅಷ್ಟೇ...

5:12 PM  
Blogger mala rao said...

ಮಹಂತೇಶ್ ಅವರಿಗೆ,
ದುರ್ಗಕ್ಕೆ ಸ್ವಾಗತ. ನಿಮ್ಮ ಮೆಚ್ಚುಗೆಗಾಗಿ ಥ್ಯಾಂಕ್ಸ್
ನೀವು ಝೆನ್ ಬಗ್ಗೆ ಯಾವ ವಿವರ ಕೇಳಿದಿರಿ ಅಂತ ನನಗೆ ಅರ್ಥ
ಆಗಲಿಲ್ಲಾ

5:14 PM  
Blogger mala rao said...

ಅನ್ವೇಶಿಗಳೇ,
ಇನ್ನು ಮೇಲೆ ನಿಮ್ಮ ವರದಿಗಾರರ `ಪ್ರಸ್ತಾಪ' ಇರುವ
ಗಾದೆಗಳನ್ನು ಉಪಯೋಗಿಸುವಾಗ ಹುಷಾರಾಗಿರ್ತೀನಿ!

5:16 PM  

Post a Comment

Subscribe to Post Comments [Atom]

<< Home