ಮನದಂಗಳದಲ್ಲೊಂದು ಹಾಡು, ಹಸೆ.....
ಮೊನ್ನೆ ಮತ್ತೊಮ್ಮೆ ಕೆ.ಎಸ್.ನರಸಿಂಹ ಸ್ವಾಮಿಯವರ `ಹಾಡು-ಹಸೆ' ಓದಿದೆ.ಹಾಡು -ಹಸೆ ಕೆ.ಎಸ್.ನ ಅವರ ಹಲವು ಕವನ ಸಂಕಲನಗಳಿಂದ ಆಯ್ದ ಕವನ ಮಲ್ಲಿಗೆಗಳ ಮಾಲೆ ಮತ್ತೆ ಮತ್ತೆ ಓದಿದರೂ ಮನಕ್ಕೆ ತೃಪ್ತಿಯಾಗದು ಇಲ್ಲಿನ ಎಲ್ಲಾ ಕವನಗಳನ್ನೂ ಅವುಗಳ ಮೂಲ ಸಂಕಲನಗಳಲ್ಲಿ ಓದಿದ್ದೆನಾದರೂ`ಹಾಡು -ಹಸೆ' ಮತ್ತೊಮ್ಮೆ 'ಅಂದು ಅವುಗಳನ್ನು ಸವಿದು ಸುಖಿಸಿದ ನೆನಪು 'ಕೊಟ್ಟಿತು
ಮದುವೆಯಾಗಿ ಅಮ್ಮನ ಮನೆ ಬಿಟ್ಟು ಬಂದ ಮೇಲೆ ಅಮ್ಮನ ಮನೆಗೆ ಹೋಗುವುದು ವರುಷಕ್ಕೆ ಎರಡೋ ಮೂರೋ ಬಾರಿ ಅಷ್ಟೇ...ಹೀಗೆ ಯಾವಾಗಲೋ ಒಮ್ಮೆ ಹೋದಾಗ ಅಮ್ಮ ಮಾಡಿದ ನಮಗಿಷ್ಟದ ಸಿಹಿ ತಿಂದ ಘಳಿಗೆ, ಚಿಕ್ಕವರಿದ್ದಾಗ ಅದೇ ಸಿಹಿಯನ್ನು ಅಮ್ಮ ಮಾಡಿಕೊಟ್ಟಿದ್ದು ನೆನೆಸಿ ಕೊಂಡು ಅಮ್ಮಾ.....ನೀನವತ್ತು ಮಾಡಿದ್ದೆಯಲ್ಲಾ ಈಗ ಇದನ್ನ ತಿನ್ನುವಾಗ ಅದೇ ನೆನಪು ಬರುತ್ತೇ..." ಅಂತಾ ನೆನೆಸಿ ಕೊಳ್ತೀವಲ್ಲಾ ಹಾಗೇ ಅನ್ನಿಸಿತು `ಹಾಡು-ಹಸೆ ಓದಿದಾಗ....'
ಚಂದ್ರ ನಾಥ ಆಚಾರ್ಯರು ತಮ್ಮ ಸಿರಿ ಕುಂಚದಿದ ಕಡೆದಿರುವ ಕೆ.ಎನ್ .ನ ರ `ಕಲ್ಪನಾ ಸುಂದರಿ'ಯ ಮುಖಪುಟದ ಚಿತ್ರದೊಂದಿಗೆ ಕವನದ ಕೆಲ ಸಾಲುಗಳು.....
ಅಡಿಯ ಮಟ್ಟ ನೀಳ ಜಡೆ
ಮುಡಿಯ ತುಂಬ ಹೂವ ಹೆಡೆ
ಇವಳು ಅಡಿಯನಿಟ್ಟ ಕಡೆ
ಹೆಜ್ಜೆ ಹೆಜ್ಜೆಗೆ ಒಂದು
ದೊಡ್ಡ ಮಲ್ಲಿಗೆ
ಅಂಗಾಲಿನ ಸಂಜೆಗೆಂಪು
ಕಾಲಂದುಗೆ ಗೆಜ್ಜೆಇಂಪು
ಮೋಹದ ಮಲ್ಲಿಗೆಯ ಕಂಪು
ಕರೆದುವೆನ್ನನು ನಾನು
ಹಿಡಿಯ ಹೋದೆನು....
ಜೀವನದಲ್ಲಿ ಸಾಹಿತ್ಯ, ಸಂಗೀತ,ತಿಳಿವಿನ "ಸಾಧನೆ "ಗಳ ಇಂಥಾ" ಕಲ್ಪನಾಸುಂದರಿ" ಯನ್ನು
ಬೆನ್ನು ಹತ್ತಿದ ಎಲ್ಲರಿಗೂ ಶುಭವಾಗಲೀ.... ಅಂತಾ ಆಶಿಸುತ್ತಾ...
0 Comments:
Post a Comment
Subscribe to Post Comments [Atom]
<< Home