Monday, September 18, 2006

ಕನ್ನಡಿ ಮಾತಾಡಿದಾಗ...

ಆಯಿನಾ ಮುಜ್ ಸೆ ಮೇರೀ ಪೆಹೆಲೆಸೀ ಸೂರತ್ ಮಾಂಗೇ...
ಮೇರಿ ಅಪನೇ ಮೇರೀ ಹೋನೇ ಕಿ ನಿಶಾನಿ..ಮಾಂಗೇ...

ತಲತ್ ಅಝೀಜ್ ಹಾಡಿರುವ ಈ ಹಾಡು ಕೇಳುತ್ತಾ ಒಂದು ಕ್ಷಣ ಯೋಚಿಸಿದೆ
ಕನ್ನಡಿ ನಿಜವಾಗಿಯೂ ನಮ್ಮನ್ನ ಒಂದು ಬೆಳಗ್ಗೆ ನಮ್ಮ `ಪೆಹೆಲೆ ಸೀ ಸೂರತ್' ಕೇಳಿದರೇ.... ಹೇಗೆ ತಂದು ಕೊಡುವುದು ಹತ್ತು ವರುಷದ ಹಿಂದಿನ ಆ ಚೆಂದದ ಮೊಗವನ್ನಾ...?

ಎಲ್ಲಿಂದ ತಂದು ಅದರ ಮುಂದೆ ನಿಲ್ಲಿಸುವುದು`ಕಣ್ಣಲ್ಲಿ ಹುಚ್ಚೆದ್ದ ಹೊಂಗನಸು ' ತುಂಬಿರುವ ಆ ಮುಗ್ಧ ಮುಖವನ್ನು...? ಗೊತ್ತಾಗಲಿಲ್ಲಾ....
ಹಾಗೇ `ನಮ್ಮವರು' ಅಂದುಕೊಂಡವರೇ ನಮ್ಮ ಅಸ್ಥಿತ್ವಕ್ಕೊಂದು ಸಾಕ್ಷಿ ಕೇಳಿದರೆ? ನಮ್ಮ `ಇರುವಿಕೆ' ಒಪ್ಪಿಕೊಳ್ಳಲೂ ನನ್ನವರು ಅಂದು ಕೊಂಡವರು ಪುರಾವೆಗಳನ್ನು ಕೇಳುವಂತಾಗುವ ಸ್ಥಿತಿ......ಮುಂದೆ ಯೋಚಿಸಲೂ ಮನಸ್ಸಾಗಲಿಲ್ಲಾ...

ಜುಳು ಜುಳು ಹರಿವ ನದಿಯಲ್ಲಿ ಮುಖ ನೋಡಿಕೊಳ್ಳುತ್ತಾ ನಿಂತ ಈ ಬಿಂಕದ ಸಿಂಗಾರಿಯರನ್ನು ನೋಡಿ...
ನಮ್ಮ ತರ `ಒಂದೆ ಒಂದು ಜನ್ಮದಲ್ಲಿ ಒಂದೆ ಬಾಲ್ಯ ಒಂದೆ ಹರಯ ಅಲ್ಲವಲ್ಲಾ' ಇವರುಗಳದ್ದು...
ಪ್ರತಿ ವರುಷವೂ ಚಿಗುರಿದಾಗ ಬಾಲ್ಯ..ಹೂ ತಳೆದಾಗ ಹರೆಯ! ಹೊಟ್ಟೆ ಕಿಚ್ಚಾಯಿತು ನನಗೆ.

` ಸೂರತ್' ಕಥೆ ಹಾಗಿರಲೀ ಅದು ಕಾಲನ ಕುಡುಗೋಲಿಗೆ ಸಿಕ್ಕಿಬೀಳದೇ ವಿಧಿ ಇಲ್ಲಾ...ಆದರೆ ಮನಸ್ಸೆಂಬಾ ಈ ಮನಸ್ಸನ್ನು ಮುಟ್ಟಲು ಯಾವ ಕಾಲಪುರುಷನಿಗೆ ಸಾಧ್ಯ?ಅದಕ್ಕೆ ಹರಯದ ಹುರುಪು ತುಂಬುವುದೂ, ಮುದಿ ಹತ್ತಿಸಿ ಮುಪ್ಪು ತಂದುಕೊಳ್ಳುವುದೂ ನಮ್ಮ ಕೈಲೇ ಇದೆ ಅಲ್ಲವಾ? ಅನ್ನಿಸಿತು

ನಮ್ಮ ಇರುವಿಕೆಗೆ ಪುರಾವೆ ಕೇಳುವವರು ನಿಜವಾಗಿಯೂ ನಮ್ಮವರೇನಾ? ಖಂಡಿತಾ ಇರಲಾರರು

ಹೀಗೆ ಯೋಚಿಸಿದ ಮೇಲೆ ಮನಸ್ಸು ಹಗುರವಾಯಿತು, ತಿಳಿಯಾಯಿತು....

9 Comments:

Anonymous Anonymous said...

ಮಾಲಾ, ಇಂದಿನ ಚಿತ್ರ, ವಿಚಾರ ಎರಡೂ ಚೆನ್ನ. ಮನದ ಕಲಕಿ ಚಿತ್ರ ಮರೆಯಾಗುವ ಮುನ್ನ ಅಭಿನಂದನೆಗಳು. ಯೋಸೆಮಿಟಿಯ 'ಮಿರರ್ ಲೇಕ್'ಚಿತ್ರವೆ?
-ಜ್ಯೋತಿ.

11:10 AM  
Blogger bhadra said...

ಸುಂದರ ವಿಚಾರ. ಕಳೆದ ಕ್ಷಣಗಳನ್ನು ಮರಳಿ ತರಲಾಗದು. ಆದರಿಲ್ಲಿನ್ನೊಂದು ನನ್ನ ಮನದ ವಿಚಾರ ಮಂಡಿಸಲೇ?

ಕೇನೋಪನಿಷತ್ತಿನ ಪ್ರಕಾರ ಈ ಜೀವನ ಒಂದು ಕನಸಿನಂತೆ. ಆ ಕನಸಿನಿಂದ ಆಚೆ ಬರುವವರೆವಿಗೆ ಅದು ಕನಸೆಂದು ತಿಳಿಯಲಾಗದು. ಈ ಕನಸಿನಿಂದ ಆಚೆ ಬಂದವರು ಯಾರಾದರೂ ಇದ್ದಾರಾ? ನೀವು ತಿಳಿಸಿದಂತೆ ಗತಕಾಲಕ್ಕೆ ಹೋದವರಿದ್ದಾರಾ? ನಿಮ್ಮನ್ನು ಎದುರಿಗೆ ನೋಡುವವರೆವಿಗೂ ಅದೊಂದು ಮಿಥ್ಯೆ.
ಏನೇನೋ ಬರೆದುಬಿಟ್ಟೆ. ಕ್ಷಮಿಸಿ.

10:35 PM  
Blogger Mahantesh said...

Snaps maarta sakkata agide bolre bhasheyalli...

11:09 PM  
Blogger Anveshi said...

ಮಾಲಾ ಅವರೆ,

ಅತ್ತಿಂದಿತ್ತ ಓಲಾಡೋ ಮನಸ್ಸಿಗೆ ಹೊಸ ಹುರುಪು ತುಂಬುತ್ತಾ, ನವಚೇತನದ ಟಾನಿಕ್ ಕೊಡುತ್ತಾ, ಸದಾನಂದದಿಂದ ಇರುವಂತೆ ಮಾಡುವುದು ನಮ್ಮ ಕೈಯಲ್ಲೇ ಇವೆಯಲ್ಲಾ...
ಈ ಮಾತುಗಳು ತುಂಬಾ ಇಷ್ಟವಾಯಿತು.

ಆದರೂ... ಗತಿಸಿಹೋದ ಆ ದಿನಗಳು...
ಛೆ...!!! ಮರೆಯಬೇಕೆಂದರೂ pop-up ಆಗುತ್ತವೆಯಲ್ಲಾ...!
----
ಆ ಮೇಲೆ...
ಹಳೆಯ, ಹುಚ್ಚೆದ್ದ ಹೊಂಗನಸು ತುಂಬಿದ ಮುಗ್ಧ ಮುಖವನ್ನು ಯಾರಾದ್ರೂ ಕೇಳಿದರೆ, ಆವತ್ತು ಕನ್ನಡಿಯ ಮುಂದೆ ನಿಂತೇ ತೆಗೆದುಕೊಂಡ ಫೋಟೋ ತೋರಿಸಿದರಾಯಿತು... :)

12:22 AM  
Blogger mala rao said...

ಜ್ಯೋತಿಗೆ, ದುರ್ಗಕ್ಕೆ ಸ್ವಾಗತ!
ಮೆಚ್ಚುಗೆಗೆ ಥ್ಯಾಂಕ್ಸ್
ಇದು ಯೆಲ್ಲೊ ಸ್ಟೋನ್ ರಿವೆರ್

5:02 PM  
Blogger mala rao said...

ಮಾವಿನಯಾನಸೇ,
ಕೇನೋಪನಿಶತ್ತಿನ ತಿಳುವಿನ ವಿಚಾರ ಹಂಚಿಕೊಡಿದ್ದಕ್ಕಾಗಿ ಧನ್ಯವಾದಗಳು
ನೀವು `ಏನೇನೋ'ಬರೆದಿದ್ದರೂ ಬರೆದಿದ್ದು ಚಿಂತನೆಗೆ
ಹಚ್ಚುತ್ತಿದೆ
ಹೀಗೇ ಅಗಾಗ ಬರುತ್ತಿರಿ ಮತ್ತು ಆಗಾಗ ಬರೆಯುತ್ತಿರಿ ಎಂದು ಆಶಿಸಲೇ?

5:06 PM  
Blogger mala rao said...

ಮಹಂತೇಶ್
ನೀವು ಫೋಟೋ ಮೆಚ್ಚಿಕೊಂಡಿದ್ದು ಗೊತ್ತಾಯಿತು
ಥ್ಯಾಂಕ್ಸ್.
ನಿಮ್ಮ ಎರಡನೇವಾಕ್ಯ ಅರ್ಥವಾಗಲಿಲ್ಲಾ

5:07 PM  
Blogger mala rao said...

ಅನ್ವೇಶಿಗಳೇ,
ನಿಮ್ಮ ಮೆಚ್ಚುಗೆಗೆ ವಂದನೆಗಳು
ನಿಮ್ಮ ಸಲಹೆ ಚೆನ್ನಾಗಿದೆ ನೆನಪಿಟ್ಟು ಕೊಳ್ಳುವೆ

5:09 PM  
Blogger bhadra said...

ಮಾಲಾ ಅವರೇ, ಮಹಂತೇಶ ಹೇಳುತ್ತಿರುವುದು ಹೀಗಿರಬಹುದು. ಬೋಲ್ ರೇ - ಇದು ಹಿಂದಿ ಭಾಷೆ. ದಕ್ಷಿಣ ಭಾರತದಲ್ಲಿ ಹಿಂದಿಯ ಉಪಯೋಗ ಕಡಿಮೆ ಇರುವುದರಿಂದ ಅದನ್ನು ತುರುಕ ಭಾಷೆ ಎಂದೆನ್ನುವರು. ತಲತ್ ಅಜೀಝ್ ಅವರ ಗಾಯನದ ಭಾಷೆಯನ್ನು ಬಹುಶಃ ತುರುಕ ಭಾಷೆ ಎಂದು ಅರ್ಥೈಸುತ್ತಿರಬಹುದು.

ಈ ಪದದ ಬಗ್ಗೆ ನನಗೆ ಹೇಗೆ ಗೊತ್ತೆನ್ನುವಿರಾ? ವಂಶದಕುಡಿ ಎಂಬ ಕಥೆ ಬರೆಯುವಾಗ ಇದರ ಬಗ್ಗೆ ಸ್ವಲ್ಪ ಅಭ್ಯಾಸ ಮಾಡಿದ್ದೆ.

9:15 AM  

Post a Comment

Subscribe to Post Comments [Atom]

<< Home