ಮಧುಕರಿಗಳೇ ಬನ್ನೀ...
ಮಧು ಮಾಸ ಬಂದಿಹುದು ಮಧುಕರಿಗಳೇ ಬನ್ನಿ
ಮಧುರಕರ ಗೀತಗಳಿಗಾವು ನಲಿವಾ
ಹೃದಯದಾಸೆಗಳೆಲ್ಲಾ ಫಲಿತವಾಗುವ ಕಾಲ...
ಮೃದುಹೃದಯ ಕುಸುಮಗಳು ಅರಳ್ವ ಕಾಲ...
ಮಧುಕರಿಗಳು ಮತ್ತಿನಿಂದ ಮಧುಹೀರುತ್ತಾ ಈ ಮಧುರ ಅನುಭೂತಿ ಹೊಂದುತ್ತಾ ಇದ್ದದ್ದು ಕಂಡಿದ್ದು ಸ್ಯಾನ್ ಹೋಸೆಯ ಉದ್ಯಾನವೊಂದರಲ್ಲಿ...
ನಮ್ಮ ಕವಿಗಳೆಲ್ಲಾ ಮಧುಕರಿಗಳ ಮಧುರಾನುಭವಗಳನ್ನೇ
ನೆನಪು ಮಾಡಿದರೆ ಇಂಗ್ಲೀಷಿನಲ್ಲಿ ಒಂದೆರಡು ನಗು ಮಿಂಚಿಸುವ
ಹಾಡುಗಳು ಅಲ್ಲಲ್ಲಿ ಸಿಗುತ್ತವೆ ಅಂಥಾ ಎರಡು ನಿಮಗಾಗಿ ಇಲ್ಲಿವೆ..
What do you suppose?
A bee sat on my nose.
Then what do you think?
He gave me a wink.
And said, "I beg your pardon,
I thought you were a garden."
*********************************
Bees that buzz
At my elbows and knees
No sir, I'm not
Fond of these.
But bees that buzz
Near flowers and stem,
Making honey --I like them.
Mmmmm!
.
6 Comments:
olle camera work re nimmadu...
heege chitragaLu barta irali...
nanage,asatyigaLige,pubbigarige madhu amdre bere eneno nenapAgi biDutte.. :)
Nose ಮೇಲೆ bee ಮಧು ಹೀರೋಕೆ ಬಂದಿದ್ದು ಸುತ್ತಮುತ್ತ ಅರಳೋ ಮೃದುಮಧುರ pimples ನೋಡಿ ಇರಬಹುದೇ?
ಹಾಡಿನ ಮೊದಲ ಸಾಲು
ಮಧು-ಮಾಂಸ ಬಂದಿಹುದು ಅಂತ ಕೇಳಿದ್ದಕ್ಕೆ ಸ್ವಲ್ಪ ಗೊಂದಲವಾಯಿತು. :)
ಅಂದ ಹಾಗೆ ಅದು ಯಾರ ಕವನ? ತುಂಬಾ ಚೆನ್ನಾಗಿದೆ.
ಮಧುವಿನ ಬಗ್ಗೆ ಚೆನ್ನಾಗಿ ಬರೆದಿದ್ದೀರಿ. ಇಂಗ್ಲೀಷಿನಲ್ಲಿ ಬರೆದದ್ದು ತಮಾಷೆಯಾಗಿದೆ. ಗಾರ್ಡನ್ ಎಂದು ಬರೆದದ್ದು ನೋಡಿ ಕೈಲಾಸಮ್ಮರ ಒಂದು ನಾಟಕದ uptodate ಸಖಿಯ ಹಾಡು ನೆನಪಿಗೆ ಬರುತ್ತಿದೆ - ಅದು ಹೀಗಿದೆ
ಏನಿ gardernಊ ಬಹಳ silly
ನೋಡಲೂ not a rose or lilly
waste of timeಊ walking ಇಲ್ಲೀ
rotten garder surely
follow me maidenಗಳೆಲ್ಲಾ flowery ವಿಲಾಯ್ತಿಗೇ
frost and snow and coldಅ ತಡೆಯದೇ fogಇ ನಲ್ಲೀ shiverಉವಾ
ನೀವು ಆಗಾಗ್ಯೆ ಮುಂಬಯಿಗೆ ಬರುತ್ತಿರುವೆ ಎಂದಿರಿ. ಒಮ್ಮೆ ನಮ್ಮ ಮನೆಗೆ ಬನ್ನಿ. ಬರುವ ಮೊದಲು ನನ್ನ ಅಂಚೆ ವಿಳಾಸಕ್ಕೆ ಒಂದು ಪತ್ರ ಬರೆದರೆ ಸಾಕಷ್ಟೆ. id tvsrinivas41@gmail.com
ಒಳ್ಳೆಯದಾಗಲಿ
ಮಹಂತೇಶರೇ,
ನೀವುಗಳೆಲ್ಲಾ ಹೀಗೇ ಪ್ರೋತ್ಸಾಹ ಕೊಡುತ್ತಿದ್ದರೆ ಖಂಡಿತಾ
ಫೋಟೋಗಳೂ,ತಲೆ ಕೊರೆಯುವ ಲೇಖನಗಳೂ
ಪುಂಖಾನುಪುಂಖವಾಗಿ ಬರುತ್ತಿರುತ್ತವೆ ಎಚ್ಚರಿಕೆ!
ಅನ್ವೇಷಿಗಳೇ,
`ಮಧು-ಮಾಂಸ'ಖಂಡಿತಾ ತಮ್ಮ ಖವನವೇ!
ಮಧು-ಮಾಸ ಯಾರ ಕವನವೆಂದು ನನಗೆ ನೆನಪಿಲ್ಲಾ
ಬೆಂಗಳೂರು ಆಕಾಶವಾಣೀಯ ಕೃಪೆ...ಅಲ್ಲೇ ನಾನು
ಕೆಲವು ವರುಶಗಳ ಹಿಂದೆ ಈ ಹಾಡು ಕೇಳಿದ್ದು
ನೆನಪಿರುವಷ್ಟು ಬರೆದೆ
ಯಾರದದು ಪಿಂಪಲ್ ಮುಖಕಮಲ? ಕ್ಲಿಯರೇಸಿಲ್ ಕೊಳ್ಳಲು
ಹೇಳಿ!
ಮಾವಿನ ರಸದವರಿಗೆ ಮಧು ಇಷ್ಟವಾದ್ದರಲ್ಲಿ ಅಚ್ಚರಿಯೇನು?
ನಿಮ್ಮ ಕೈಲಾಸಂ ನಾಟಕದ ಗೀತೆ ಚೆನ್ನಾಗಿದೆ
ನಾನು ಎಂಜಾಯ್ ಮಾಡಿದೆ
ಮುಂಬೈಗೆ ಬಂದಾಗ ಖಂಡಿತಾ ಬರುವೆ
ಅಕ್ಕರೆಯ ಆಹ್ವಾನಕ್ಕಾಗಿ ಧನ್ಯವಾದಗಳು
Post a Comment
Subscribe to Post Comments [Atom]
<< Home