Wednesday, April 23, 2008

ಡೇಸಿ ಹೂವಿನ ಹಾಡು


The Field Daisy

I'm a pretty little thing,
Always coming with the spring;
In the meadows green I'm found,
Peeping just above the ground,
And my stalk is cover'd flat
With a white and yellow hat.
Little Mary, when you pass
Lightly o'er the tender grass,
Skip about, but do not tread
On my bright but lowly head,
For I always seem to say,
"Surely winter's gone away."
-Ann Taylor (1782 - 1886)
**************************
ಇಂಗ್ಲೆಡ್ನಲ್ಲಿ ಹುಟ್ಟಿ ಬೆಳೆದ Ann Taylor ಮಕ್ಕಳಿಗಾಗಿ ಹಲವಾರು ಸುಂದರ ಪದ್ಯಗಳನ್ನೂ ಪ್ರಾರ್ಥನಾ ಗೀತೆಗಳನ್ನೂ ಬರೆದಿದ್ದಾಳೆ ಇವಳ ಸೋದರಿ ಜೇನ್ ಕೂಡಾ ಪ್ರತಿಭಾವಂತಳೇ.ಈ ಸೋದರಿಯರು ಕೂಡಿ ಬರೆದ "Twinkle, twinkle, little Star," ಪದ್ಯವನ್ನು ಉಲಿಯದ ಮಗುವೇ ಇಲ್ಲ ಎನ್ನಬಹುದು!

Monday, April 07, 2008

ಯು..ಗಾ..ದಿ..


ಬೇವಿನ ಕಹಿ ಬಾಳಿನಲಿ ಹೂವಿನ ನಸುಗಂಪು ಸೂಸಿ ಜೀವಕಳೆಯ ತರುತಿದೆ
ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಎಲ್ಲರಿಗೂ ಹೊಸವರ್ಷದ ಶುಭಾಷಯಗಳು

Thursday, April 03, 2008

ಹೆಂಗಸರ ಚಪ್ಪಲಿ ಆರ್ಕಿಡ್...!

ಇದು ಹೆಂಗಸರ ಚಪ್ಪಲಿ ಎಂಬ ಆರ್ಕಿಡ್! ನಾನು ತಮಾಶೆ ಮಾಡುತ್ತಿಲ್ಲ ನಿಜ್ವಾಗ್ಲೂ...ಈ ಜಾತಿಯ ಆರ್ಕಿಡ್ ಅನ್ನು ಲೇಡೀಸ್ ಸ್ಲಿಪ್ಪರ್ ಅಥ್ವಾ ವೀನಸ್ ಸ್ಲಿಪ್ಪರ್ ಆರ್ಕಿಡ್ ಅಂತ ಕರೀತಾರೆ ಅಂದ ಚಂದದ ಲಲನೆಯ ನಾಜೂಕು ಚಪ್ಪಲಿಯನ್ನು ಹೋಲುವುದಿಲ್ಲವೇ ಈ ಹೂವು?
ಇದು ಅತೀ ಸಾಮಾನ್ಯವಾದ Paphiopedilum ಎಂಬ ಆರ್ಕಿಡ್ ಜಾತಿಗೆ ಸೇರಿದೆ
ಇನ್ ಮೇಲೆ ಯಾರಾದ್ರೂ ಹುಡ್ಗಿ ಚಪ್ಪಲಿ ತೋರಿಸಿದರೆ ಹೂವ ತೋರಿಸಿದಳು ಅಂತ ಸಮಾಧಾನ ಪಟ್ಕೋಬೋದು...