Friday, March 27, 2009

ಯುಗಾದಿ ಶುಭಾಶಯ


ಯುಗಾದಿ ಶುಭಾಶಯಗಳು

Tuesday, March 17, 2009

ವಸಂತದ ಕಚಗುಳಿ


ವಸಂತದ ಹೂಗಳೆಲ್ಲಾ ಕಚಗುಳಿ
ಇಡುತ್ತಿರುವಾಗ ಬಂದ
ನೆನಪು ಯಾರದು?



ಅರೆ ತೆರೆದ ಕದವ
ಗಾಳಿ ತಳ್ಳಿದ ಜೋರಿಗೆ
ಎದೆ ಕದಕ್ಕೆ ಯಾವ ನೆನಪು?



ಆಕಾಶದ ಮೋಡಗಳ ಚೆತ್ತಾರದಿ
ಕಂಗಳು ಕಂಡ
ಮುಖ ಯಾರದು?



ಬೇಸಿಗೆಯ ದಿನದಲ್ಲಿ
ಬಿದ್ದ ಮಳೆ ಹನಿ
ತೋಯಿಸಿದ ನೆನಪದಾವುದು?

Saturday, March 07, 2009

2009ರ ಮೊದಲ ಡ್ಯಾಫೋಡಿಲ್!

ಇದು ಈ ವರ್ಷ ನನ್ನ ತೋಟದಲ್ಲಿ ಅರಳಿದ ಮೊದಲ ಡ್ಯಾಫೋಡಿಲ್
ಚಿತ್ರದಲ್ಲಿ ಕಾಣುವ ಮೊಗ್ಗು ಕಿಂಗ್ ಆಲ್ಫ್ರೆಡ್ ಜಾತಿಯ ಹೂವಿನದ್ದು
ಅಚ್ಚ ಅರಿಸಿನ ಬಣ್ಣದ ಈ ಹೂ ಅರಳಿದಾಗ ಚಿತ್ರ ಹಾಕುತ್ತೇನೆ

ಅಮೆರಿಕದ ಓದುಗರಿಗೆ ನೆನಪೋಲೆ-
ಇವತ್ತು ಮಲಗುವ ಮೊದಲೋ ನಾಳೆ ಬೆಳಗ್ಗೆಯೋ ಗಡಿಯಾರ ಮುಂದೆ ಮಾಡಬೇಕು ಯಾಕೆ ಗೊತ್ತಲ್ಲಾ...

Thursday, March 05, 2009

ಹಲೋ...ಪಿಂಕ್ ...

ಇವೆಲ್ಲಾ ಚಿತ್ರಗಳೂ ನಾನು ತೆಗೆದವೇ... ಈಗಾಗಲೇ ಬಹಳಷ್ಟನ್ನು ದುರ್ಗದಲ್ಲಿ ಹಾಕಿದ್ದೇನೆ ಕೊಲಾಜ್ ನಲ್ಲಿ ಹೇಗೆ ಕಾಣುತ್ತೆ ನೋಡಿ
ಒಂದೆರಡು ಬಿಳಿಹೂಗಳಿದ್ದರೂ ಯಾಕೋ ಇದಕ್ಕೆ ಹಲೋ ಪಿಂಕ್ ಅನ್ನೋಣ ಅನ್ನಿಸಿತು
ಪಿಂಕ್ ಅದರಲ್ಲೂ ತಿಳಿಪಿಂಕ್ ನನಗೆ ತುಂಬಾ ಇಷ್ಟ ಒಂಥರ ಮನಸ್ಸಿಗೆ ಹಾಯ್ ಅನ್ನಿಸುತ್ತೆ
ನಿಮಗೆ ಹೇಗನ್ನಿಸಿತು...? ನನಗೆ ಹೇಳೀ...

Wednesday, March 04, 2009

ಚಿಗುರೆಲೆಗಳೇ...

ಹಸಿರು...ಜೀವನೋತ್ಸಾಹದ ಬಣ್ಣ...
ಹನಿ ಹನಿಯಾಗಿ ಮಳೆ ಬಿದ್ದು ಕಣ್ಣು ಹಾಯಿಸಿದೆಡೆಯೆಲ್ಲಾ ಚಿಗುರೇ ಚಿಗುರು...


ಹಸಿರಿಗೆ COLOR OF HOPE AND RENEWAL ಅಂತ ಯಾರು ಕರೆದರೋ... ಸರಿಯಾಗೇ ಕರೆದಿದ್ದಾರೆ
ಚಿಕ್ಕ ಚಿಕ್ಕ ಹೀಚುಗಳನ್ನೂ ಚಿಗುರೆಲೆಗಳನ್ನು ಹೊತ್ತ ಮರಗಿಡಗಳನ್ನು ನೋಡಿ ನಾವು ಜೀವನದಲ್ಲಿ ಉತ್ಸಾಹ ತಂದುಕೊಳ್ಳಲೀ ಅಂತಾನೇ ಇವುಗಳು ಬರುತ್ತವಾ...
ಹೌದು ಹಾಗೆ ಇರಬೇಕು..devine plan...ಪ್ರಕೃತಿಯ ಸುಂದರ ಸಂಚು...!


ಮನಕ್ಕೆ ಮುದ ಕೊಟ್ಟ ಚಿಗುರೆಲೆಗಳೇ..ನಿಮಗೆ ವಂದನೆ
ಹಾಗೇ ಹೀಚು ಕಾಯಿಗಳಿಗೂ....Thanks...