Thursday, May 24, 2007

ಎಲ್ಲರಿಗೂ ನಮಸ್ಕಾರ....

ಚಿತ್ರದುರ್ಗಕ್ಕೆ ಕೆಲದಿನಗಳ ವಿರಾಮ ಕೊಡುತ್ತಿದ್ದೇನೆ
ಈಗಾಗಲೇ ಪೋಸ್ಟಿಂಗ್ ಗಳ ಸಂಖ್ಯೆ ಕಡಿಮೆಯಾಗಿದ್ದು ನಿಮ್ಮ ಗಮನಕ್ಕೆ ಬಂದಿರಬೇಕು...
ದಯವಿಟ್ಟು ಕೋಪ ಮಾಡಿಕೊಳ್ಳಬೇಡಿ....

ಮತ್ತೆ ಹೊಸ ಉತ್ಸಾಹದೊಂದಿಗೆ ನಿಮ್ಮನ್ನು ಭೇಟಿಯಾಗುವ ಹಂಬಲವಿದೆ
ನಾಳಿನ ಕಣಜದಲ್ಲಿ ಯಾವ ಕಾಳು ಇದೆಯೋ ಬಲ್ಲವರಾರು?

ನಿಮ್ಮೆಲ್ಲರ ಒಡನಾಟ ಇಷ್ಟು ದಿನ ಖುಷಿ ತಂದಿತು
ಇದನ್ನೆಲ್ಲ ಆಗುಮಾಡಿಸಿದ ಇಂಟರ್ ನೆಟ್ ಎಂಬ ದೈತ್ಯನಿಗೆ,
ಪ್ರತಿಕ್ರಿಯೆ ನೀಡಿ ಹುರುಪು ತುಂಬಿದ ನಿಮ್ಮೆಲ್ಲರಿಗೆ
ಎದೆಯಾಳದ ನೆನೆಕೆಗಳು

ಮತ್ತೆ ಭೇಟಿಯಾದಾಗ ತುಟಿಯಂಚಿನಲ್ಲಿ ಕಿರು ನಗುವಿರಲಿ...

ಎಲ್ಲರಿಗೂ ನಮಸ್ಕಾರ....

Thursday, May 17, 2007

IF...

`IF'
If you can dream - and not make dreams your master,
If you can think - and not make thoughts your aim;
If you can meet with Triumph and Disaster
And treat those two impostors just the same;
If you can bear to hear the truth you've spoken
Twisted by knaves to make a trap for fools,
Or watch the things you gave your life to, broken,
And stoop and build 'em up with worn-out tools:


If you can make one heap of all your winnings
And risk it all on one turn of pitch-and-toss,
And lose, and start again at your beginnings
And never breath a word about your loss;
If you can force your heart and nerve and sinew
To serve your turn long after they are gone,
And so hold on when there is nothing in you
Except the Will which says to them: "Hold on!"


If you can talk with crowds and keep your virtue,
Or walk with kings - nor lose the common touch,
If neither foes nor loving friends can hurt you,
If all men count with you, but none too much;
If you can fill the unforgiving minute
With sixty seconds' worth of distance run,
Yours is the Earth and everything that's in it,
And - which is more - you'll be a Man, my son!

Rudyard Kipling (1865-1936)

**************************
ಜಂಗಲ್ ಬುಕ್ ಯಾಗಿಗೆ ಗೊತ್ತಿಲ್ಲ? ಅದನ್ನು ಬರೆದವನು RUDYARD KIPLING.ಮೋಗ್ಲಿ ಎಂಬ ಕಾಡಲ್ಲಿ ಬೆಳೆದ ಹುಡುಗನ ಸಾಹಸಗಳು, ಅವನ ಪ್ರಾಣಿ ಗೆಳೆಯರು... ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಪ್ರಿಯ

*****************
ಕಿಪ್ಲಿಂಗ್ ಹುಟ್ಟಿದ್ದು,ಐದು ವರ್ಷಗಳಾಗುವವರೆಗೂ ಬೆಳೆದಿದ್ದು ಬಾಂಬೆಯಲ್ಲಿ.ಕಲಾಕಾರ ತಂದೆ, ಚುರುಕು ತಾಯಿಯ ಜೊತೆ ಆನಂದವಾಗಿ ಬೆಳೆಯುತ್ತಿದ್ದ ಹುಡುಗನನ್ನು ಓದಲೆಂದು ಇಂಗ್ಲೆಂಡ್ ಗೆ ಕಳಿಸಲಾಯಿತು ಮತ್ತು ಕಿಪ್ಲಿಂಗ್ ಅವನ ಸಾಕುತಾಯಿಯಿಂದ ಕಿರುಕುಳ ಅನುಭವಿಸಬೇಕಾಯ್ತು

ಕಾಲೇಜು ವಿದ್ಯಾಭ್ಯಾಸ ಮುಗಿಸಿ ಭಾರತಕ್ಕೆ ವಾಪಸಾದ ಕಿಪ್ಲಿಂಗ್ ಕೆಲ ವರ್ಷ ಭಾರತದಲ್ಲೇ ಇದ್ದು ಬರವಣಿಗೆ ಪ್ರಾರಂಭಿಸಿದ.ನಂತರ ಅಮೆರಿಕಾದಲ್ಲಿ ಕೆಲಕಾಲ ವಾಸ್ತವ್ಯ ಹೂಡಿ ಇಂಗ್ಲೆಂಡ್ ನಲ್ಲಿ ನೆಲೆಯಾದ ಬಾಲ್ಯದಲ್ಲಿ ತಾನು ಅನುಭವಿಸಿದ ಕಿರುಕುಳ,ಶಾಲಾದಿನಗಳಲ್ಲಿ ಹೊಂದಿದ ಅಪಮಾನ,ಅವನ ಮನದಲ್ಲಿ ಆಳವಾದ ನೋವು ತುಂಬಿದ್ದವು ಮುಂದೆ ಅವನ ಮಕ್ಕಳಿಬ್ಬರ ಮರಣ ಅವನ ದಿಕ್ಕುಗೆಡಿಸಿತು ಅದರಲ್ಲೂ ಮಗಳು ಜೋಸೆಫೀನ್ ಳ ಅಗಲಿಕೆಯ ನೋವು ಅವನಿಂದ ಸಹಿಸಲಾಗದೇ ಹೋಯಿತು

**************
If' ಪದ್ಯವು 'Rewards and Fairies'ಎಂಬ ಕವನ ಸಂಗ್ರಹದಲ್ಲಿದೆ
ಕಿಪ್ಲಿಂಗ್ ನ ಇತರ ಜನಪ್ರಿಯ ಕೃತಿಗಳು,Jungle Book(1894) Kim(1901),ಮತ್ತು Just So Stories (1902).
ಕಿಲ್ಪಿಂಗ್ ಗೆ 1907 ರಲ್ಲಿ ಸಾಹಿತ್ಯಕ್ಕಾಗಿ ಇರುವ ನೋಬೆಲ್ ಪ್ರಶಸ್ತಿ ಬಂತು

Thursday, May 03, 2007

ನಗುತ ಬಾಳು ಜೀವವೇ...

ಏಕೆ ಅರ್ಥ ಬಾಳಿಗೆ
ಏಕೆ ಅರ್ಥ ನಾಳೆಗೆ
ಅರ್ಥವೊಂದು ಯಾಕೆ ಬೇಕು
ಅರಳಿ ನಗಲು ಹೂವಿಗೇ

ಕಳೆದು ಹೋದ ನೆನ್ನೆಗೆ
ಕಂಡುಮರೆವ ನಾಳೆಗೆ
ಬರೆದುದೆಲ್ಲಾ ಅಳಿಸಿ ಹೋಗಿ
ಬಿಡುವ ಖಾಲಿ ಹಾಳೆಗೆ

ನೋಟ ನೆಡಲಿ ಆಟದಿ
ಗೆಲುವ ಆಸೆ ಮನದಲೀ
ಸೋತರೇನು ಆಟ ತಾನೇ
ಎನುವ ಜಾಣ್ಮೆ ಕಾಯಲೀ

ನಗುತ ಬಾಳು ಜೀವವೇ
ಮಾವುಬೇವು ಧಾಳಿಗೇ
ನಗುತ ಬಾಳು ಜೀವವೇ
ಹುಳಿಬೆರೆಸದೆ ಹಾಲಿಗೇ

-ಎನ್.ಎಸ್. ಲಕ್ಷ್ಮೀ ನಾರಾಯಣ ಭಟ್ಟ