Thursday, September 21, 2006

ಹಸಿರು ಚಾಮರಗಳು



ಅಂದು ಅಲ್ಲಿ ಸುಮ್ಮನೆ ಅಲೆಯುತ್ತಿದ್ದೆ.....

ಹಸಿರು, ಚಾಮರ ಬೀಸುತ್ತಿತ್ತು.

ಹಸಿರು, ಚಾಮರ ಬೀಸುತ್ತಾ ನನ್ನ ಕರೆಯಿತು

ನೀಲಿಯ ಮುಗಿಲಿನ ಚಪ್ಪರದಡಿಯಲ್ಲಿ,

ಸಾವಿರ ನಕ್ಷತ್ರದಂಥಾ ಬಿಳಿ ಬಿಳಿ ಹೂ ಹಾಸಿರುವಲ್ಲಿ,

ಹಸು ಮಗುವಿನಂಥಾ ಚಿಗುರುಗಳ ನಗುವಿನಲ್ಲಿ,

ಇಬ್ಬನಿಯ ಮುತ್ತುಗಳು ಹಗುರಾಗಿ ಹರಡಿರುವಲ್ಲಿ,

ತಂಗಾಳಿಯು ತನ್ನ ತಂಪು ಸೆರಗು ಪಟಪಟಿಸುತ್ತಿರಲು,

ನದಿಯ ಹೆಜ್ಜೆಯ ಗೆಜ್ಜೆ ದನಿ ನಿನಾದ ಕೇಳುತ್ತಿರಲು,

ಈ ಹಸಿರು ಚಾಮರಗಳು ನನ್ನ ಕರೆದವು.

ಈ ಹಸಿರು ಚಾಮರಗಳು`ನಲಿವಿನಿಂದ' ನನ್ನ ಕರೆದವು.

ಮಂತ್ರಮುಗ್ಧಳಂತೆ ನಾನು ಅವುಗಳ ಬಳಿ ಸಾರಿದೆ.....

3 Comments:

Blogger Satish said...

ಹ್ಞೂ, 'ಚಿತ್ರ'ದುರ್ಗ, ಈಗ 'ಕಾವ್ಯ'ಸ್ವರ್ಗವಾಗ್ತಾ ಇದೆ!

'ಹಸಿರು ಚಾಮರಗಳು' ಅನ್ನೋ ಶೀರ್ಷಿಕೆ ಕಲರ್ರು ನಿಮ್ಮ ಚಿತ್ರದ ಕಲರ್ರಿಗೆ ಚೆನ್ನಾಗಿ ಹೊಂದಿಕೊಂಡಿದೆ ನೋಡಿ!

'ಹಸು ಮಗುವಿನಂಥಾ...' ಎಂದರೆ ಏನು ಎಂದು ಸ್ವಲ್ಪ ಯೋಚಿಸೋ ಹಾಗೆ ಮಾಡಿದ್ರಿ, 'ನದಿಯ ಹೆಜ್ಜೆಯ ಗೆಜ್ಜೆ'ಯನ್ನು ಊಹಿಸಿಕೊಳ್ಳೊದಕ್ಕೆ ಸ್ವಲ್ಪ ಕಷ್ಟಾ ಅಯ್ತು...

'ನಲಿವಿನಿಂದ' ಅನ್ನೊದನ್ನ ಇನ್ನೂ ಯೋಚಿಸ್ತಾನೇ ಇದ್ದೀನಿ, ಇನ್ನೂ ಹೊಳೆದಿಲ್ಲ! :-)

8:12 PM  
Blogger nishu mane said...

Mala, 'hasiru chamara'da pic-ge full marks. chitra-durgada kOTe tumbaa shreemantavaagtaa ide....hushaaraagiru..onake pakkadalle ittukonDideeya taane?

padagaLa bhaarakke chaamaragaLu jagguttide anta nanage annisidre, nange onake ETu koDalla taane matte?

6:20 PM  
Blogger mala rao said...

ಕಾಳು ಅವರೇ ಮತ್ತೊಮ್ಮೆ ದುರ್ಗಕ್ಕೆ ಸ್ವಾಗತ
ಹಸುಮಗು ಎಂಬುದನ್ನು ನಾನು ಹೊಸದಾದ ಚಿಗುರನ್ನು ಸೂಚಿಸಲು ಬಳಸಿದ್ದು ಹಸುಗೂಸು ಅನ್ನುತ್ತರಲ್ಲಾ ಹಾಗೇ
ಜುಳು ಜುಳು ಎನ್ನುವ ದನಿ ಹೆಜ್ಜೆಯ ಗೆಜ್ಜೆ
ನಲಿವಿನಿಂದ=ಸಂತೋಷದಿಂದ
ಚಿತ್ರ ಮೆಚ್ಚಿದ್ದಕೆ ವಂದನೆಗಳು

3:54 PM  

Post a Comment

Subscribe to Post Comments [Atom]

<< Home