Friday, September 22, 2006

ನಗೆಯ ಹಾಯಿದೋಣಿ



ಅಳುವ ಕಡಲೊಳು ತೇಲಿ ಬರುತಲಿದೆ ನಗೆಯ ಹಾಯಿದೋಣಿ

ಬಾಳ ಗಂಗೆಯ ಮಹಾಪೂರದೊಳು ಸಾವಿನೊಂದು ಏಣಿ

ಆಸೆಯೆಂಬ ತಳ ಒಡೆದ ದೋಣಿಯಲ್ಲಿ ದೂರತೀರಯಾನ

ಯಾವ ಲೀಲೆಯೋ ಯಾರೋ ಏನೋ ಗುರಿ ಇರದೆ ಬಿಟ್ಟ ಬಾಣ

ಇದು ಬಾಳು ನೋಡು ಇದ ತಿಳಿದೆನೆಂದರೂ ತಿಳಿದ ಧೀರರಿಲ್ಲಾ

ಹಲವುತನದ ಮೈಮರೆಸುವಾಟವಿದು ನಿಜವು ತೋರದಲ್ಲಾ

3 Comments:

Anonymous Anonymous said...

ಮಾಲಾ, ಶ್ರೀ ಕಾಳಿಂಗರಾಯರ ಗಂಭೀರ ಕಂಠದಲ್ಲಿ ಕೇಳಿದ್ದ ಈ ಹಾಡಿನ ಕೆಲವು ಸಾಲುಗಳನ್ನು ಓದುವಾಗ ಅವರದೇ ದನಿ ಕಿವಿಯಲ್ಲಿ ಗುನುಗಿದಂತಾಯ್ತು. ಇದರಲ್ಲಡಗಿದ ಜೀವನ ಸತ್ಯ, ಸತ್ವ ಕಾಲಾತೀತ. ಧನ್ಯವಾದಗಳು.

12:27 AM  
Anonymous Anonymous said...

http://www.udbhava.com/usearch/search.spring?ps=on&md=on&ly=on&cat=0&qs=P+Kalinga+Rao&st=on&at=on&sx=on

11:58 AM  
Blogger mala rao said...

ಹೌದು ಜ್ಯೋತಿ
ಹಾಡಿನ ಲಿಂಕ್ ಕಳೀಸಿದ್ದಕ್ಕೆ ವಂದನೆಗಳು

3:49 PM  

Post a Comment

Subscribe to Post Comments [Atom]

<< Home