ಬನದಲಿ ದಿನದಿನ...
ಬನದಲಿ ದಿನ ದಿನ ಬಣ್ಣದ ಹೂಗಳು
ನಿನ್ನಯ ಚೆಲುವನು ಸಾರುತಿವೇ...
ಕೋಗಿಲೆ ಗಿಳಿಗಳು ನಿನ್ನಿನಿಗೊರಳಿನ
ಇಂಪಿನ ದನಿಯನು ಬೀರುತಿವೇ...
ಇಂಪಿನ ದನಿಯನು ಬೀರುತಿವೇ...
ಬೀಸುವ ತಣ್ಣನೆ ತಂಪಿನ ಗಾಳಿ
ನಿನ್ನುಸಿರೊಲವನು ತೋರುತಿದೇ..
ನಳನಳಿಸಿರುವ ಬಿರಿ ಹೂಗಳಿವು
ನಿನ್ನೊಡಲಂದವ ಮೆರೆಯುವುದೇ...
ನಿನ್ನೊಡಲಂದವ ಮೆರೆಯುವುದೇ...
ಬನದೊಳು ನೀನು ನಿನ್ನೊಳು ನಾನು
ನಾನೂ ನೀನೂ ಬನದೊಳಗೂ...
ಬನದೊಳು ನೀನು ಕನವರಿಪಾನು
ಎಲ್ಲವು ಎನ್ನಯ ಮನದೊಳಗೂ...
ಎಲ್ಲವು ಎನ್ನಯ ಮನದೊಳಗೂ...
4 Comments:
ಚಿತ್ರ ತುಂಬಾ ಸುಂದರವಾಗಿದೆ.
ಮಾಲಾ ಅವರೆ,
ಕವನಕ್ಕೂ ಚಿತ್ರಕ್ಕೂ ತುಂಬಾ ಹೋಲಿಕೆಯಿದೆಯಲ್ಲಾ.... :)
ನಿಮಗೆ ಮಾಡಿದ ಕಾಮೆಂಟ್‌ಗಳೆಲ್ಲವೂ ಮರಳಿ ನನ್ನ ಮೇಲ್-ಬಾಕ್ಸ್‌ಗೆ ರಪ್ಪನೆ ಮುಖಕ್ಕೆ ಬಡಿದಂತೆ ಬಂದು ಬೀಳುತ್ತಿವೆ....
ಬಹುಶಃ ನಿಮ್ಮ mail ಸೆಟ್ಟಿಂಗ್ ದೋಷವಿರಬಹುದೇ? ಉಳಿದವರಿಗೂ ಹೀಗೇ ಆಗುತ್ತದೆಯೇ ಗೊತ್ತಿಲ್ಲ.
ದಯವಿಟ್ಟು ಪರಿಶೀಲಿಸಿ.
ಮಸಸ್ವಿನಿ ಅವರಿಗೆ ದುರ್ಗಕ್ಕೆ ಸ್ವಾಗತ
ನಿಮ್ಮ ಕಮೆಂಟ್ಸ್ ಗಾಗಿ ಥ್ಯಾಂಕ್ಸ್
ಆಗಾಗ ಹೀಗೇ ಬರ್ತಾ ಇರಿ
ಅನ್ವೇಶಿ ಗಳೇ,
ಚಿತ್ರ ಹಾಡು ನಿಮಗಿಷ್ಟವಾಗಿದ್ದು ಸಂತೋಷ
ಕಮೆಂಟ್ಸ್ ಯಾಕೆ ರಿಜೆಕ್ಟ್ ಆಗ್ತಿದೆ ಅಂತ ನೋಡುತ್ತೇನೆ
Post a Comment
Subscribe to Post Comments [Atom]
<< Home