Tuesday, September 26, 2006

ಗೋಲ್ಡನ್ ಗೇಟ್ ಬ್ರಿಡ್ಜ್ ಎಂಬ "ಸುವರ್ಣ ಸುಂದರಿ"



ಗೋಲ್ಡನ್ ಗೇಟ್ ಬ್ರಿಡ್ಜ್ ಅಂದಾಕ್ಷಣ ಚಿನ್ನದ ಬಣ್ಣದ ಸೇತುವೆ ಕಣ್ಣ ಮುಂದೆ ಬರುತ್ತಿದೆಯೇ? ಹೆಸರಲ್ಲಿ ಗೋಲ್ಡ್ ಇದ್ದರೂ ಇದು ಹವಳದ ಕೆಂಪಿನ ಬಣ್ಣದ್ದು! ಗೋಲ್ಡನ್ ಸ್ಟೇಟ್ ಎಂದೇ ಮುದ್ದಾಗಿ ಕರೆಸಿ ಕೊಳ್ಳುವ ಕ್ಯಾಲಿಫೋರ್ನಿಯದಲ್ಲಿರುವುದರಿಂದ ಸುವರ್ಣ ಸೇತುವೆ ಎಂದೋ, ಕ್ಯಾಲಿಫೋರ್ನಿಯದ `ಗೋಲ್ಡ್ ರಶ್' ನೆನಪಿಸಿಕೊಡು `ಓ ಅದಕ್ಕೇ ಇದು ಗೋಲ್ಡನ್ ಗೇಟ್' ಅಂದು ಕೊಂಡಿರೋ ಕೆಟ್ಟಿರಿ! ಕ್ವಿಝ್ ನಲ್ಲಿ ಬಝರ್, ಕ್ವೀ ...ನಿಮ್ಮ ಉತ್ತರ ತಪ್ಪು ಅಂದು ಬಿಡತ್ತೆ!

ಕ್ಯಾಲಿಫೋರ್ನಿಯದಲ್ಲಿ ಚಿನ್ನದ ರಶ್ಶು ಶುರುವಾಗುವ ಮೊದಲೇ ಅಂದರೆ 1846 ರಲ್ಲೇ ಯು.ಎಸ್.ಆರ್ಮಿಯ ಲೆಫ್ಟನೆಂಟ್ ಜಾನ್.ಸಿ.ಫ್ರಿಮಾಂಟ್ ಈಗ ಬ್ರಿಡ್ಜ್ ಇರುವ ಜಾಗಕ್ಕೆ ಗೋಲ್ಡನ್ ಗೇಟ್ ಅಂತ ಕರೆದಿದ್ದ. ಬ್ರಿಡ್ಜ್ ಕಟ್ಟಿದ್ದು 1937ರಲ್ಲಿ! ಫೆಸಿಫಿಕ್ ಸಾಗರದಿಂದ sanfrancisco bay ಗೆ ದ್ವಾರದಂತಿದ್ದ ಈ ಇರುಕಲಾದ strait ಅನ್ನು ನೋಡಿ ಲೆಫ್ಟನೆಂಟ್ ಫ್ರಿಮಾಂಟ್ ಗೆ ವ್ಯಾಪಾರ ವಾಣಿಜ್ಯ ನಡೆಸಲು ಆಯಕಟ್ಟಿನಲ್ಲಿದ್ದ ಇದು ಚಿನ್ನದ ದ್ವಾರ ಅನ್ನಿಸಿತು ಜೊತೆಗೆ ಅವನಿಗೆ ಇಲ್ಲಿನ ಹಾರ್ಬರ್ ನೋಡಿ ಇಸ್ತಾಂಬುಲ್ ನ `ಗೋಲ್ಡನ್ ಹಾರ್ನ್' ಹಾರ್ಬರ್ ನೆನಪಿಗೆ ಬಂತು ಬೈಝಾಂತಿಯನ್ ಹೆಸರಾದ `ಗೋಲ್ಡನ್ ಹಾರ್ನ್' ಅನ್ನು ನೆನಪಿಸಿದ ಜಾಗಕ್ಕೆ ಫ್ರಿಮಾಂಟ್ `ಗೋಲ್ಡನ್ ಗೇಟ್' ಎಂದೇ ಕರೆದ.ಹೀಗೆ ಇದು `ಗೋಲ್ಡನ್ ಗೇಟ್' ಅಂತ ಹೆಸರು ಪಡೆದಿದ್ದು

1937 ರ ಮೇ 27ರಂದು ಸಾರ್ವಜನಿಕರಿಗೆ ಸಂಚಾರ ಮುಕ್ತವಾದ ಈ ಸೇತುವೆ sanfrancisco ಸಿಟಿಯ ಉತ್ತರ ತುದಿಯನ್ನೂ ಮರೀನ್ ಕೌಂಟಿಯ ಪುಟ್ಟ ಊರು ಸಾಸಲಿಟೊ ದೊಂದಿಗೆ ಸೇರಿಸುತ್ತದೆ.1964ರ ತನಕ ಇದು ಪ್ರಪಂಚದ ಅತಿ ಉದ್ದದ suspension bridge ಆಗಿತ್ತು.ಇದರ longest span 4,200 ಅಡಿಗಳು.ಒಟ್ಟು ಉದ್ದ 1.7 ಮೈಲಿಗಳು.ಅಗಲ 90ಅಡಿಗಳು

ಈ ಚಿನ್ನದ ರಾಣಿ ಸ್ವಲ್ಪ ಚಂಚಲ ಚಿತ್ತೆ ನಮ್ಮೂರಿಗೆ ಬಂದವರ ಹತ್ರ " ಎಷ್ಟು ಚೆನ್ನಾಗಿದಾಳೆ ಗೊತ್ತಾ...ಬನ್ನಿ ತೋರಿಸುತ್ತೇವೆ" ಅಂತ ಜಂಭ ಹೊಡೆದು ಕರೆದುಕೊಂಡು ಹೋದರೆ fog ನ ಪರದೆಯಲ್ಲಿ ಮುಖ ಮುಚ್ಚಿಕೊಂಡು ಬಿಟ್ಟಿರುತ್ತಾಳೆ! ಏನೋ ನಿಮ್ಮಗಳ ಪುಣ್ಯ ನಿಮಗೆ ತೋರಿಸಲೆಂದು ಫೋಟೋ ತೆಗೆಯುವೆನೆಂದಾಗ ನನಗೆ ಅವಳು ಪೋಸ್ ಕೊಟ್ಟಳು!

2 Comments:

Blogger Satish said...

ಅಲ್ ಸ್ವಾಮೀ, ನಿಮ್ ವಸ್ತುಗಳೆಲ್ಲ ಬರೀ ಹೆಣ್ ವಸ್ತುಗಳೇ ಆಗ್ತಾವಲ್ಲಾ, ಇಂತಾ ಬ್ರಿಜ್ ಏನಾರಾ ನಮ್ ಊರಿನ್ಯಾಗ್ ಇದ್ದಿದ್ದ್ರೆ 'ರಾಜಾ' ಅಂತ ಕರೀತಿದ್ವಿ ನೋಡ್ರಿ.

6:35 PM  
Blogger mala rao said...

ಕಾಳೂರಾಜರಿಗೆ,
ತಮ್ಮ ಸ್ವಗ್ರಾಮದಲ್ಲಿ ಒಂದು ಸೇತುವೆ ಕಟ್ಟಿ ಅದಕ್ಕೆ `ಕಾಳೂರಾಜ' ಎಂದು ಹೆಸರಿಡಲು ಈ ಮೂಲಕ
ಅನುಮತಿ ನೀಡಲಾಗಿದೆ
-ಇಂತಿ
ದುರ್ಗದ ದೊರೆಗಳು
(ಸಹಿ)

7:12 PM  

Post a Comment

Subscribe to Post Comments [Atom]

<< Home