Tuesday, November 27, 2007

The Kiss



The Kiss

Before you kissed me only winds of heaven
Had kissed me, and the tenderness of rain -
Now you have come, how can I care for kisses
Like theirs again?

I sought the sea, she sent her winds to meet me,
They surged about me singing of the south -
I turned my head away to keep still holy
Your kiss upon my mouth.

And swift sweet rains of shining April weather
Found not my lips where living kisses are;
I bowed my head lest they put out my glory
As rain puts out a star.

I am my love's and he is mine forever,
Sealed with a seal and safe forevermore -
Think you that I could let a beggar enter
Where a king stood before?
-Sara Teasdale (1884 - 1933)

********************
ಇವತ್ತಿಗೆ Pulitzer Prizeಎಂದು ಕರೆಯಲ್ಪಡುವ ಸಮ್ಮಾನವನ್ನು ಅದು ಆ ಹೆಸರಿನಿಂದ ಕರೆಯಲ್ಪಡುವ ಮುನ್ನವೇ ಪಡೆದಿದ್ದ ಪ್ರತಿಭಾವಂತೆ ಸಾರಾ ಟೀಸ್ ಡೇಲ್ ಮಧುರವಾದ ಹಲವು ಪ್ರೇಮ ಕವನಗಳನ್ನು ಬರೆದಿದ್ದಾಳೆ
ನಿಸರ್ಗದ ಚೆಲುವಿನ ಚಪ್ಪರದಡಿ ಅರಳುವ ಸಾವಿನ ಮತ್ತು ಪ್ರೇಮದ ಬಗೆಗಿನ ಸಾರಾಳ ಕವಿತೆಗಳು ಆಳವಾಗಿ ಮನಕಲಕುತ್ತವೆ

Wednesday, November 21, 2007

ಕಂಗಳು ತುಂಬಿರಲು...


Weep, weep, mine eyes, my heart can take no rest;
Weep, weep, my heart, mine eyes shall ne'er be blest;
Weep eyes, weep heart, and both this accent cry,
A thousand thousand deaths I die,
I die.Cruel Fortune, to die I fear not,
Death, now do thy worst, I care not!
I hope when I am dead in Elysian plain
To meet, and there with joy we'll love again.
-John Wilbye (1574- 1638)
**************
John Wilbye ಇಂಗ್ಲಿಷ್ ಮ್ಯಾಡ್ರಿಗಲ್ ಸ್ಕೂಲ್ ನ ಬಹು ಮುಖ್ಯ ರಚನಕಾರ.ಇವನ ರಚನೆಗಳು ಸರಳವೂ ಮಧುರವೂ ಆಗಿವೆ ಹಾಡುವುದಕ್ಕೆಂದೇ ಬರೆದವಾದ್ದರಿಂದ ಪದಗಳ ಚಲನೆಯಲ್ಲಿ ಲಾಲಿತ್ಯವಿದೆ.ಸುಮ್ಮನೆ ಓದಿಕೊಂಡರೂ ಇವುಗಳಲ್ಲಿ ಮಿಳಿತವಾದ ರಾಗವೊಂದು ನಿಮಗೆ ಗಮನಕ್ಕೆ ಬಾರದೇ ಇರದುಮನಕ್ಕೆ ಹಿತವಾಗುವ ನಾದದ ಅಲೆಯು ನಿಮ್ಮನ್ನು ದೂರ ತೀರಕ್ಕೆ ಕರೆದೊಯ್ಯುವುದು...

Monday, November 19, 2007

Love's philosophy

Love's philosophy

The fountains mingle with the river

And the rivers with the ocean,

The winds of Heaven mix for ever

With a sweet emotion;

Nothing in the world is single,

All things by a law divine

In one spirit meet and mingle

- Why not I with thine?
See the mountains kiss high Heaven

And the waves clasp one another;

No sister-flower would be forgiven

If it disdained its brother;

And the sunlight clasps the earth,

And the moonbeams kiss the sea

- What are all these kissings worth

If thou kiss not me?

-Percy Bysshe Shelley (1792-1822)

******************

ಶೆಲ್ಲಿ ರೊಮ್ಯಾಂಟಿಕ್ ಯುಗದ ಪ್ರಮುಖ ಕವಿ. Love's philosophy ಶೆಲ್ಲಿಯ ಪ್ರಮುಖ ಪದ್ಯವೇನಲ್ಲ
If Winter comes, can Spring be far behind?’ ಎಂಬ ಸ್ಪೂರ್ತಿದಾಯಕ ಸಾಲುಗಳನ್ನೂ Look upon my works, ye mighty, and despair ಎಂದು ಮಾನವ ಜೀವನದ ಕ್ಷಣಿಕತೆಯನ್ನು ಸಾರುವ ಸಾಲುಗಳನ್ನೂ ಬರೆದಿದ್ದಾನೆ ಶೆಲ್ಲಿ
ಶೆಲ್ಲಿಯದು( ಅವನ ಕಾಲಕ್ಕೆ) ತುಂಬಾ ರೆಬಲ್ ಮನೋಭಾವ ಅದೇ ಕಾರಣಕ್ಕೆ ಆಕ್ಸ್ ಫರ್ಡ್ ನಿಂದ ಹೊರಹಾಕಲ್ಪಟ್ಟ ಜೀವನವೋ ದುರಂತಗಳ ಸರಮಾಲೆ ಇವೆಲ್ಲದರ ನಡುವೆಯೂ ಸುಂದರ ಪದ್ಯಗಳನ್ನು ಕಾವ್ಯಾಸಕ್ತರಿಗೆ ಬಿಟ್ಟು ಹೋಗಿದ್ದಾನೆ
**********

ಕೇವಲ ಇಪ್ಪತ್ತೊಂಭತ್ತು ವರ್ಷಕ್ಕೇ ಸತ್ತು ಹೋದ ಶೆಲ್ಲಿ,ಇಪ್ಪತ್ತಾರು ವರುಷವಷ್ಟೇ ಬದುಕಿದ್ದ ಕೀಟ್ಸ್ ಇವರುಗಳ ಕಾವ್ಯ ಓದಿದಾಗ ಎಷ್ಟು ಚಿಕ್ಕ ವಯಸ್ಸಿಗೇ ಏನೆಲ್ಲಾ ಬರೆದು ಹೋಗಿದ್ದಾರಲ್ಲಾ ಅಂತ ಅಚ್ಚರಿಯಾಗುತ್ತೆ ಹಾಗೆಯೇ ನಾನೇನೂ ಮಾಡುತ್ತಿಲ್ಲವಲ್ಲಾ ಅಂತ ಬೇಸರವಾಗುತ್ತೆ..

Friday, November 09, 2007

ದೀಪಾವಳಿ ಶುಭಾಶಯಗಳು


ಜಗದೆಲ್ಲಾ ಕತ್ತಲೆ ಮನದೆಲ್ಲಾ ಕತ್ತಲೆ
ಇನ್ನು ಕಳೆದು ಹೋಗಲಿ
ಜ್ಞಾನ ರಶ್ಮಿಯ ಬೆಳಕು ತುಂಬಿಕೊಳಲಿ
ನೋವು ದುಗುಡಗಳು ದೂರಾಗಲಿ
ನಗೆ ನೆಮ್ಮದಿ ಮಲ್ಲಿಗೆ ಅರಳಿ ನಗಲಿ
ಎಲ್ಲರಿಗೂ ದೀಪಾವಳಿ ಶುಭಾಶಯಗಳು

Wednesday, November 07, 2007

ನಂದ ಗೋಕುಲಕೆ ಬನ್ನಿ...

ಅಮ್ಮ ನನಗೆ ಅಂತ ಒಂದು ಬ್ಲಾಗ್ ಮಾಡಿದಾಳೆ ಅದ್ರ ಹೆಸರು `ನಂದಗೋಕುಲ' ಅಂತ ನಾನು ಕೃಷ್ಣ ಅಲ್ವಾ...ಅದಕ್ಕೇ ನಾನು ನನ್ನ ಸ್ನೇಹಿತರು ಎಲ್ಲಾ ಕೂಡಿ ಹಾಡಿ ಆಡುವ ಜಾಗಕ್ಕೆ ನಂದ ಗೋಕುಲ ಅಂತಾನೆ ಅಮ್ಮ ಹೆಸರಿಟ್ಟಿದ್ದು ನಂದಗೋಕುಲದಲ್ಲಿ ಅಮ್ಮ ನಂಗೆ ಮತ್ತೆ ನನ್ನಂತ ಪುಟಾಣಿಗಳಿಗೆ ಅಂತ ಮಕ್ಕಳ ಹಾಡು, ನರ್ಸರಿ ರೈಮ್ಸ್ ಎಲ್ಲಾ ಹಾಕ್ತಾಳೆ ದೊಡ್ಡ ದೊಡ್ದ ಕವಿಗಳು ಬರೆದ ಹಾಡುಗಳು,ಇಂಗ್ಲಿಷ್ ರೈಮ್ಸ್ ಜೊತೆಗೆ ನಂಗೆ ಅಂತ ಅಮ್ಮ ಬರೆದ ಸೂಪರ್ ಫ್ರೆಶ್ ಹಾಡುಗಳು ಇಲ್ಲಿ ನಿಮ್ಗೆ ಸಿಗುತ್ವೆ ಜೊತೆಗೆ ನನ್ನ ಮತ್ತು ಪುಟಾಣಿ ಗಳ ಫೋಟೋನೂ ಹಾಕ್ತಾಳೆ ಅಮ್ಮ.

ನೀವೆಲ್ಲಾ ನನ್ನ ನಂದ ಗೋಕುಲಕ್ಕೆ ಬನ್ನಿ...
ಎಲ್ರೂ ಒಟ್ಟಿಗೆ ಹಾಡೋಣಾ...ಮತ್ತೆ ಆಡೋಣಾ...
ನಾನು ಕಾಯ್ತಾ ಇರ್ತೀನೀ...
ಬರ್ತೀರಿ ಅಲ್ವಾ...

-ಅಮರ್ತ್ಯ ಕೃಷ್ಣ